ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರ ಪತ್ನಿ ಬುಶ್ರಾ ಬೀಬಿ ಅವರ ಹಿಂದಿನ ವಿವಾಹದ ಕಿರಿಯ ಪುತ್ರ, ಅಂದರೆ ಪ್ರಧಾನಿಯವರ ಮಲಮಗನ ವಿರುದ್ಧ ಲಿಕ್ಕರ್ ಕೇಸ್ ದಾಖಲಾಗಿದೆ. ಲಾಹೋರ್ ಪೊಲೀಸರು ಪ್ರಧಾನಿ ಮಗನ ಕಾರಿನಲ್ಲಿ ಮದ್ಯ ಲಭ್ಯವಾಗಿದೆ ಎಂದು ಆತನ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆಂದು ವರದಿಯಾಗಿದೆ.
ಎಫ್ಐಆರ್ ಪ್ರಕಾರ, ಗಾಲಿಬ್ ಮಾರ್ಕೆಟ್ ಪೊಲೀಸರು ಸೋಮವಾರ ಮುಂಜಾನೆ ಅವರ ಕಾರಿನಿಂದ ಮದ್ಯವನ್ನು ವಶಪಡಿಸಿಕೊಂಡು, ಮುಹಮ್ಮದ್ ಮೂಸಾ, ಅವರ ಸೋದರ ಸಂಬಂಧಿ ಮೊಹಮ್ಮದ್ ಅಹ್ಮದ್ ಮನೇಕಾ ಮತ್ತು ಸ್ನೇಹಿತ ಅಹ್ಮದ್ ಶಹರ್ಯಾರ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.
BIG NEWS: ಕ್ರಿಕೆಟ್ ಅಭಿಮಾನಿಗಳಿಗೆ ಖುಷಿ ಸುದ್ದಿ ನೀಡಿದ BCCI
ಜಹೂರ್ ಇಲಾಹಿ ರಸ್ತೆಯಲ್ಲಿ ಪೊಲೀಸ್ ಪಿಕೆಟ್ ದಾಟುತ್ತಿದ್ದಾಗ ಮೂವರನ್ನು ಬಂಧಿಸಲಾಗಿದೆ. ಮೂವರು ಶಂಕಿತರ ವಿರುದ್ಧ ನಿಷೇಧದ ಉಪವಿಭಾಗ 3, 4 ಮತ್ತು 11 ರ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿದ ನಂತರ ಅವರ ಸ್ನೇಹಿತ ಶಹರ್ಯಾರ್ ಕುಡಿದಿರುವುದು ಕಂಡುಬಂದಿದೆ. ಮೂಸಾ ಮತ್ತು ಅಹ್ಮದ್ ಅವರು ಆ ಸಮಯದಲ್ಲಿ ನಿಷಿದ್ಧ ಪದಾರ್ಥಗಳನ್ನು ಸೇವಿಸದ ಕಾರಣ ಅವರನ್ನ, ಬಿಡುಗಡೆ ಮಾಡಲಾಗಿದೆ. ಕುಡಿದಿದ್ದ, ಶಹರ್ಯಾರ್ ನ್ಯಾಯಾಲಯದಿಂದ ಜಾಮೀನು ಪಡೆದಿದ್ದಾರೆ. ಇನ್ನು ಪೊಲೀಸರು ವಶಪಡಿಸಿಕೊಂಡ ಮದ್ಯದ ಮಾದರಿಯನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ.