
ದಾವಣಗೆರೆ: ಪತಿಯ ಕಿರುಕುಳಕ್ಕೆ ಬೇಸತ್ತ ತಾಯಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಬೆನ್ನಲ್ಲೇ ಅಮ್ಮನ ಸಾವಿಗೆ ಕಾರಣನಾದ ತಂದೆಯನ್ನ ಮಗ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಲಕ್ಕೀಂಪುರ ಗ್ರಾಮದಲ್ಲಿ ನಡೆದಿದೆ.
ಕಲ್ಲು ಎತ್ತಿಹಾಕಿ ತಂದೆ ಅಂಜನಪ್ಪ (60)ನನ್ನು ಮಗ ರಮೇಶ್ ಹತ್ಯೆ ಮಾಡಿದ್ದಾನೆ. ಅಜನಪ್ಪ ಪ್ರತಿದಿನ ಕುಡಿದುಬಂದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದ. ಪತಿಯ ಕಿರುಕುಳಕ್ಕೆ ಪತ್ನಿ ತಪ್ಪಮ್ಮ (52) ನೇಣಿಗೆ ಕೊರಳೊಡ್ಡಿದ್ದಳು. ಇದರಿಂದ ರೊಚ್ಚಿಗೆದ್ದ ಮಗ ತಾಯಿ ಸಾವಿಗೆ ತಂದೆಯೇ ಕಾರಣವೆಂದು ಕೋಪಗೊಂಡು ತಂದೆಯನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ.
ಸದ್ಯ ಆರೋಪಿ ರಮೇಶ್ ನನ್ನು ಜಗಳೂರು ಪೊಲೀಸರು ಬಂಧಿಸಿದ್ದಾರೆ.