
ಮುಂಬೈನಲ್ಲಿ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಅಳಿಯನೊಬ್ಬ, ಅತ್ತೆಯನ್ನು ಕ್ರೂರವಾಗಿ ಹತ್ಯೆ ಮಾಡಿದ್ದಾನೆ. ಮೂರು ವರ್ಷಗಳ ಜೈಲು ಶಿಕ್ಷೆ ನಂತ್ರ ಹೊರಗೆ ಬಂದ ಆರೋಪಿ ಮತ್ತೆ ಅಪರಾಧವೆಸಗಿದ್ದಾನೆ.
ವರದಿಯ ಪ್ರಕಾರ, ಆರೋಪಿ ಅಳಿಯ, ಮೊದಲು ಅತ್ತೆಯ ತಲೆಗೆ ಟೈಲ್ಸ್ ನಿಂದ ಹೊಡೆದಿದ್ದಾನೆ. ನಂತ್ರ ಅನೇಕ ಭಾಗಕ್ಕೆ ಚಾಕುವಿನಿಂದ ಇರಿದಿದ್ದಾನೆ. ಇಷ್ಟೇ ಅಲ್ಲ ಅತ್ತೆ ಖಾಸಗಿ ಭಾಗಕ್ಕೆ ಬಿದಿರಿನ ಕೋಲನ್ನು ಹಾಕಿದ್ದಾನೆ. ಇದ್ರಿಂದ ದೇಹದ ಆಂತರಿಕ ಭಾಗ ಹೊರ ಬಿದ್ದಿದೆ.
ಮೃತ ಮಹಿಳೆ ತನ್ನ ಮಗಳೊಂದಿಗೆ ಮುಂಬೈನ ವಿಲೆ ಪಾರ್ಲೆಯಲ್ಲಿ ವಾಸಿಸುತ್ತಿದ್ದಳು. ಅಳಿಯ ಜೈಲಿಗೆ ಹೋದ ನಂತ್ರ, ಮಗಳಿಗೆ ಬೇರೆ ಮದುವೆ ಮಾಡಿದ್ದಾಳೆ. ಜೈಲಿನಿಂದ ಹೊರ ಬಂದ ಅಳಿಯ, ಪತ್ನಿ ಮನೆಗೆ ಹೋಗಿದ್ದಾನೆ. ಆದ್ರೆ ಪತ್ನಿಗೆ ಇನ್ನೊಂದು ಮದುವೆಯಾಗಿ, ಮಗು ಜನಿಸಿದೆ ಎಂಬ ಸುದ್ದಿ ಕೇಳಿ ದಂಗಾಗಿದ್ದಾನೆ. ಘಟನೆ ನಡೆದ ದಿನ ಮತ್ತೆ ಅತ್ತೆ ಮನೆಗೆ ಬಂದ ಆರೋಪಿ, ಪತ್ನಿ ಅಡ್ರೆಸ್ ಕೇಳಿದ್ದಾನೆ. ವಿಳಾಸ ನೀಡಲು ಅತ್ತೆ ನಿರಾಕರಿಸಿದ್ದಾಳೆ. ಇದ್ರಿಂದ ಕೋಪಗೊಂಡ ಆರೋಪಿ, ಅತ್ತೆ ಹತ್ಯೆ ಮಾಡಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ವಿರುದ್ಧ ಈ ಹಿಂದೆ 28 ಪ್ರಕರಣ ದಾಖಲಾಗಿತ್ತು.