ಇನ್ಸ್ಟಾಗ್ರಾಮ್ ನ ಹ್ಯೂಮನ್ಸ್ ಆಫ್ ಬಾಂಬೆ ಪುಟದಲ್ಲಿ ಕಣ್ಣು ಮಂಜಾಗುವ ಲೇಖನವೊಂದು ಪ್ರಕಟವಾಗಿದೆ. ತಂದೆಗಾಗಿ ಮಗನೊಬ್ಬ ಮಾಡಿದ ಕೆಲಸ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ. ಇನ್ನು 6 ತಿಂಗಳು ಮಾತ್ರ ತಂದೆ ಬದುಕು ಎಂಬುದು ಗೊತ್ತಾಗ್ತಿದ್ದಂತೆ ತನ್ನ ಅಂಗವನ್ನೇ ದಾನ ಮಾಡಿದ ಮಗ, ಎಲ್ಲರ ಕಣ್ಣಲ್ಲಿ ದೇವರಾಗಿದ್ದಾನೆ.
ಯುವಕನ ತಂದೆಗೆ ಲಿವರ್ ಹಾಳಾಗಿತ್ತು. ತಂದೆ ಇನ್ನು 6 ತಿಂಗಳು ಬದುಕಬಹುದೆಂದು ವೈದ್ಯರು ಹೇಳಿದ್ದರು. ಲಿವರ್ ಕಸಿ ಮಾಡಿದಲ್ಲಿ ಅವರು ಬದುಕಬಲ್ಲರು ಎಂದಿದ್ದರು. ಸುಖಕರವಾಗಿ ಸಾಗ್ತಿದ್ದ ಅವರ ಜೀವನದಲ್ಲಿ ದೊಡ್ಡ ಶಾಕ್ ಇದಾಗಿತ್ತು. ಮಗ ಗ್ರ್ಯಾಜುವೆಟ್ ಆಗುವುದನ್ನು ನೋಡುವುದು ತಂದೆಯ ಕನಸಾಗಿತ್ತು. ಈಗ್ಲೇ ನನಗೆ ಸಾಯಲು ಇಷ್ಟವಿಲ್ಲವೆಂದು ತಂದೆ, ಮಗನ ಮುಂದೆ ಹೇಳಿದ್ದನಂತೆ.
ಈ ಮಧ್ಯೆ ಮಗನಿಗೆ ಕೊರೊನಾ ಬಂದಿತ್ತಂತೆ. ತಂದೆ ಜೊತೆ ವಿಡಿಯೋ ಕಾಲ್ ನಲ್ಲಿ ಮಾತನಾಡ್ತಿದ್ದ ಮಗ, ತಂದೆಗೂ ಕೊರೊನಾ ಬಂದಾಗ ಮತ್ತಷ್ಟು ಕುಸಿದಿದ್ದನಂತೆ. ತಂದೆ ಬಳಿ ಕುಳಿತು, ವಿದ್ಯಾಭ್ಯಾಸ ಮುಂದುವರೆಸಿದ್ದ ಮಗ, ಪರೀಕ್ಷೆಯಲ್ಲಿ ಪಾಸ್ ಆಗಿದ್ದನಂತೆ. ಇಷ್ಟರ ಮಧ್ಯೆ ತಂದೆ ಉಳಿಸಿಕೊಳ್ಳಲು ಮಗ ಮಹತ್ವದ ನಿರ್ಧಾರ ಕೈಗೊಂಡಿದ್ದನಂತೆ. ಲಿವರ್ ದಾನ ಮಾಡಲು ಮುಂದಾಗಿದ್ದನಂತೆ. ಆತನ ನಿರ್ಧಾರ, ಎಲ್ಲರನ್ನು ಭಯಗೊಳಿಸಿತ್ತಂತೆ. ಆದ್ರೆ ದೃಢ ನಿರ್ಧಾರ ತೆಗೆದುಕೊಂಡಿದ್ದ ಮಗ, ಎಲ್ಲದಕ್ಕೂ ಸಿದ್ಧತೆ ನಡೆಸಿದ್ದನಂತೆ. ಮಗನ ಶೇಕಡಾ 65ರಷ್ಟು ಲಿವರ್ ಭಾಗವನ್ನು ತಂದೆಗೆ ನೀಡಲಾಗಿದೆ. ಈಗ ಇಬ್ಬರೂ ಸುರಕ್ಷಿತವಾಗಿದ್ದಾರೆ. ಎಲ್ಲಕ್ಕಿಂತ ಕುಟುಂಬ ಮುಖ್ಯ ಎನ್ನುವ ಮಗನ ಕೆಲಸಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.