ಶನಿವಾರದಂದು ಅರ್ಜಿಯೊಂದರ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್, ಮಗನು ತನ್ನ ತಂದೆ ತಾಯಿಯರ ಮಾಲೀಕತ್ವದ ಫ್ಲಾಟ್ ಗಳಲ್ಲಿ ಅವರು ಜೀವಂತವಾಗಿರುವವರೆಗೆ ಹಕ್ಕು ಅಥವಾ ಆಸಕ್ತಿ ಹೊಂದುವಂತಿಲ್ಲ ಎಂದು ತೀರ್ಪು ನೀಡಿದೆ.
ತನ್ನ ಪತಿ ಒಡೆತನದ ಎಲ್ಲಾ ಆಸ್ತಿಗಳ ಕಾನೂನುಬದ್ಧ ರಕ್ಷಕ ಎಂದು ಘೋಷಿಸಬೇಕೆಂದು ಕೋರಿ ಸೋನಿಯಾ ಖಾನ್ ಎಂಬ ಮಹಿಳೆ ಅರ್ಜಿ ಸಲ್ಲಿಸಿದ್ದಾರೆ. ಸೋನಿಯಾ ಅವರ ಮಗ, ಆಸಿಫ್ ಖಾನ್ ಅವರ ಪೋಷಕರು ಜೀವಂತವಾಗಿದ್ದರೂ ಆಸ್ತಿ ಪಡೆಯಲು ಮುಂದಾಗಿದ್ದರು.
ನ್ಯಾಯಮೂರ್ತಿಗಳಾದ ಗೌತಮ್ ಪಟೇಲ್ ಮತ್ತು ಮಾಧವ್ ಜಾಮ್ದಾರ್ ಅವರ ಪೀಠ, ಮಗ ತನ್ನ ಹೆತ್ತವರನ್ನು ನೋಡಿಕೊಂಡಿದ್ದಾನೆ ಮತ್ತು ಅವನು ಬೇರೆಡೆ ವಾಸಿಸುತ್ತಿದ್ದನೆಂದು ತೋರಿಸಲು ಒಂದೇ ಒಂದು ದಾಖಲೆಯೂ ಇಲ್ಲ ಎಂಬುದನ್ನು ಗಮನಿಸಿದೆ. ಯಾವುದೇ ಸಮುದಾಯಕ್ಕೆ ಉತ್ತರಾಧಿಕಾರದ ಕಾನೂನಿನ ಅಡಿಯಲ್ಲಿ, ಅವರು ಜೀವಂತವಾಗಿರುವವರೆಗೆ ಪೋಷಕರ ಆಸ್ತಿಯಲ್ಲಿ ಹಕ್ಕು ಪಡೆಯಲು ಮಗನಿಗೆ ಅವಕಾಶವಿಲ್ಲ ಎಂದು ಪೀಠವು ಅಭಿಪ್ರಾಯಪಟ್ಟಿದೆ.
ಯಾವುದೇ ಸಮುದಾಯ ಅಥವಾ ನಂಬಿಕೆಗಾಗಿ ಉತ್ತರಾಧಿಕಾರ ಕಾನೂನಿನ ಯಾವುದೇ ಪರಿಕಲ್ಪನೆಯಲ್ಲಿ, ಆಸಿಫ್(ಮಗ) ಈ ಎರಡೂ ಫ್ಲಾಟ್‌ಗಳಲ್ಲಿ ಯಾವುದೇ ಹಕ್ಕು ಹೊಂದಿರುವುದಿಲ್ಲ. ಒಂದು ಅವನ ತಂದೆಯ ಹೆಸರಿನಲ್ಲಿದೆ ಮತ್ತು ಇನ್ನೊಂದು ಅವನ ತಾಯಿಯ ಹೆಸರಿನಲ್ಲಿದೆ. ಪೋಷಕರು ಜೀವಂತವಾಗಿ ಇರುವವರೆಗೆ ಹಕ್ಕು ಇರುವುದಿಲ್ಲ. ಆಸಿಫ್ ನಿಜವಾದ ಮಾಲೀಕರು, ಅವರ ಪೋಷಕರ ಜೀವಿತಾವಧಿಯಲ್ಲಿ ಎರಡೂ ಫ್ಲಾಟ್‌ಗಳಲ್ಲಿ ಪಾಲನ್ನು ಹೊಂದಿದ್ದಾರೆ ಎಂಬ ಸಲಹೆಯು ನಗೆಪಾಟಲಿನದಾಗಿದೆ ಎಂದು ಹೇಳಲಾಗಿದೆ.
ಖಾನ್ ಅವರ ಅರ್ಜಿ ತಿರಸ್ಕರಿಸಿದ ಪೀಠ, ಆಸಿಫ್ ಗೆ ತನ್ನ ತಂದೆಯ ಫ್ಲಾಟ್ ಗಳಲ್ಲಿ ಯಾವುದೇ ಹಕ್ಕು ಇಲ್ಲ. ಅವನು ತನ್ನ ತಂದೆಯ ಬಗ್ಗೆ ಕಾಳಜಿ ವಹಿಸಿದ್ದಾನೆಂದು ತೋರಿಸಲು ಅವನಿಗೆ ಏನೂ ಇಲ್ಲ. ಅವರ ತಾಯಿಗೆ ‘ಪರ್ಯಾಯ ಪರಿಹಾರ’ ಇದೆ ಎಂಬ ಅವರ ವಾದವನ್ನು ನಾವು ತಿರಸ್ಕರಿಸುತ್ತೇವೆ. ಆ ಸಲ್ಲಿಕೆಯೇ ನಮಗೆ ಆಸಿಫ್‌ನ ನಿಜವಾದ ಸ್ವಭಾವವನ್ನು ತೋರಿಸುತ್ತದೆ, ಅವನ ಸಂಪೂರ್ಣ ಹೃದಯಹೀನ ಮತ್ತು ದುರಾಸೆಯ ವಿಧಾನವನ್ನು ಗಮನಿಸಿ ಅವರ ಮಧ್ಯಂತರ ಅರ್ಜಿಯನ್ನು ವಜಾಗೊಳಿಸಲಾಗಿದೆ ಎಂದು ಪೀಠ ತಿಳಿಸಿದೆ.