ಖ್ಯಾತ ಬಾಲಿವುಡ್ ನಟ ಸಲ್ಮಾನ್ ಖಾನ್ ವಿರುದ್ಧ ಆತನ ಮಾಜಿ ಪ್ರೇಯಸಿ ಸ್ಪೋಟಕ ಹೇಳಿಕೆ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅವರು ಈ ವಿಚಾರವನ್ನು ಬರೆದುಕೊಂಡಿದ್ದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.
1991 ರಿಂದ 1999 ರ ವರೆಗೆ ಸಲ್ಮಾನ್ ಖಾನ್ ಜೊತೆಗೆ ಪ್ರೀತಿಯಲ್ಲಿದ್ದ ಪಾಕಿಸ್ತಾನ ಮೂಲದ ನಟಿ ಸೋಮಿ ಆಲಿ, ಸಲ್ಮಾನ್ ಖಾನ್ ಒಬ್ಬ ಸ್ಯಾಡಿಸ್ಟ್. ಅವನನ್ನು ಆರಾಧಿಸಬೇಡಿ ಎಂದು ಬರೆದುಕೊಂಡಿದ್ದಾರೆ.
ತಮ್ಮ ಪೋಸ್ಟ್ ಜೊತೆಗೆ ‘ಮೈನೇ ಪ್ಯಾರ್ ಕಿಯಾ’ ಚಿತ್ರದ ಫೋಟೋವನ್ನು ಸಹ ಸೋಮಿ ಆಲಿ ಶೇರ್ ಮಾಡಿದ್ದು, ಸಲ್ಮಾನ್ ಖಾನ್ ಮಹಿಳೆಯರ ಮೇಲೆ ದೌರ್ಜನ್ಯ ಎಸಗುವ ವ್ಯಕ್ತಿ ಎಂದು ಹೇಳಿಕೊಂಡಿದ್ದಾರೆ.
ಸಲ್ಮಾನ್ ಖಾನ್ ಅವರನ್ನು ವಿವಾಹವಾಗುವ ಇಚ್ಛೆ ಹೊಂದಿದ್ದ ಸೋಮಿ ಆಲಿ ಅವರ ಫೋಟೋವನ್ನು ಯಾವಾಗಲೂ ತಮ್ಮ ಪರ್ಸ್ ನಲ್ಲಿ ಇಟ್ಟುಕೊಂಡಿರುತ್ತಿದ್ದರು. ಅಲ್ಲದೆ ಸಲ್ಮಾನ್ ಖಾನ್ ಸಲುವಾಗಿಯೇ ತಾವು ಬಾಲಿವುಡ್ ಚಿತ್ರರಂಗಕ್ಕೆ ಬಂದಿದ್ದಾಗಿ ಹೇಳಿಕೊಂಡಿದ್ದರು.
ಆದರೆ ಆ ಬಳಿಕ ಅವರಿಬ್ಬರ ನಡುವೆ ವಿರಸ ಬಂದಿದ್ದು ಬೇರ್ಪಟ್ಟಿದ್ದರು. ಪ್ರಸ್ತುತ ಸೋಮಿ ಆಲಿ ಅಮೇರಿಕಾದಲ್ಲಿ ಸರ್ಕಾರೇತರ ಸಂಸ್ಥೆಯೊಂದನ್ನು ನಡೆಸುತ್ತಿದ್ದಾರೆ.