
ಈಗಾಗಲೇ ತನ್ನ ಶೀರ್ಷಿಕೆಯಿಂದಲೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಶ್ರೇಷ್ಠ ಅಭಿನಯದ ‘ಸೋಮು ಸೌಂಡ್ ಇಂಜಿನಿಯರ್’ ಸಿನಿಮಾ ಮುಂದಿನ ತಿಂಗಳು ಮಾರ್ಚ್ 15 ರಂದು ರಾಜ್ಯದಾದ್ಯಂತ ಬಿಡುಗಡೆಯಾಗಲಿದೆ. ಈ ಕುರಿತು ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಘೋಷಣೆ ಮಾಡಿದೆ.
ಅಭಿ ನಿರ್ದೇಶನದ ಈ ಚಿತ್ರದಲ್ಲಿ ಶ್ರೇಷ್ಠ ಸೇರಿದಂತೆ ನಿಶ್ವಿಕಾ ಪಾಟೀಲ್, ಜಹಾಂಗೀರ್, ಗಿರೀಶ್ ಜಟ್ಟಿ, ಯಶ್ ಶೆಟ್ಟಿ ಹಾಗೂ ಅಪೂರ್ವ ತೆರೆ ಹಂಚಿಕೊಂಡಿದ್ದಾರೆ. ಚರಣ್ ರಾಜ್ ಸಂಗೀತ ಸಂಯೋಜನೆ ನೀಡಿದ್ದು, ಮಾಸ್ತಿ ಮತ್ತು ಅಭಿ ಡೈಲಾಗ್ ಬರೆದಿದ್ದಾರೆ. ದೀಪು ಎಸ್ ಕುಮಾರ್ ಸಂಕಲನವಿದ್ದು, ಶ್ರೀನಿವಾಸ ಛಾಯಾಗ್ರಹಣವಿದೆ. ಇದೊಂದು ಆಕ್ಷನ್ ಥ್ರಿಲ್ಲರ್ ಕಥಾಧಾರಿತ ಸಿನಿಮಾ ಎಂದು ಹೇಳಲಾಗಿದೆ
