
ಮಾರ್ಚ್ ಆರರಂದು ʼಸೋಮು ಸೌಂಡ್ ಇಂಜಿನಿಯರ್’ ಚಿತ್ರದ ಟೈಲರ್ ಬಿಡುಗಡೆ ಕಾರ್ಯಕ್ರಮವಿದ್ದು, ಅತಿಥಿಗಳಾಗಿ ದುನಿಯಾ ಸೂರಿ ಮತ್ತು ಡಾಲಿ ಧನಂಜಯ್ ಆಗಮಿಸಲಿದ್ದಾರೆ. ಇವರ ಕೈಯಿಂದಲೇ ಟ್ರೈಲರ್ ಲಾಂಚ್ ಮಾಡಿಸಲಿದ್ದು, ಸಂಜೆ 6 ಗಂಟೆಗೆ ಯೂಟ್ಯೂಬ್ ನಲ್ಲಿ ಟ್ರೈಲರ್ ವೀಕ್ಷಿಸಬಹುದಾಗಿದೆ.
ಅಭಿ ನಿರ್ದೇಶನದ ಈ ಚಿತ್ರದಲ್ಲಿ ಶ್ರೇಷ್ಠ ನಾಯಕ ನಟನಾಗಿ ಅಭಿನಯಿಸಿದ್ದು, ನಿವಿಷ್ಕಾ ಪಾಟೀಲ್, ಜಹಾಂಗೀರ್, ಗಿರೀಶ್ ಜಟ್ಟಿ, ಯಶ್ ಶೆಟ್ಟಿ, ಅಪೂರ್ವ, ಚಂದನ್ ಕೆ ಗೌಡ ತೆರೆ ಹಂಚಿಕೊಂಡಿದ್ದಾರೆ. ಕ್ರಿಸ್ಟೋಫರ್ ಕಿನಿ ನಿರ್ಮಾಣ ಮಾಡಿದ್ದು, ದೀಪು ಎಸ್ ಕುಮಾರ್ ಸಂಕಲನ, ಶಿವಸೇನಾ ಛಾಯಾಗ್ರಹಣ. ಮಾಸ್ತಿ ಸಂಭಾಷಣೆ, ವಿನೋದ್ ಮತ್ತು ಜಾಲಿ ಬಾಸ್ಟಿನ್ ಸಾಹಸ ನಿರ್ದೇಶನವಿದೆ. ಚರಣ್ ರಾಜ್ ಸಂಗೀತ ಸಂಯೋಜನೆ ನೀಡಿದ್ದಾರೆ.