alex Certify ಕೆಲವೊಮ್ಮೆ ಮಂಗಳ ದೋಷವೂ ನೀಡುವುದುಂಟು ಶುಭ ಫಲ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೆಲವೊಮ್ಮೆ ಮಂಗಳ ದೋಷವೂ ನೀಡುವುದುಂಟು ಶುಭ ಫಲ

What is Mangal Dosh? What are the effects of Mangal Dosh? How can it be  removed? - Quora

ಮಂಗಳ ಭಗವಂತನ ದೇವರು ಎನ್ನಲಾಗಿದೆ. ಹಾಗಾಗಿಯೇ ವೈವಾಹಿಕ ಜೀವನದಲ್ಲಿ ಮಂಗಳನ ಪಾತ್ರ ಮಹತ್ವದ್ದು. ಮದುವೆ ಸಂದರ್ಭದಲ್ಲಿ ಮಂಗಳ ದೋಷವನ್ನು ನೋಡಲಾಗುತ್ತದೆ.

ಮಂಗಳನ ಸ್ಥಿತಿ ನೋಡಿಯೇ ಮದುವೆ ಮಾಡಬೇಕು. ಮಂಗಳನ ದೋಷ ಕೆಲವೊಮ್ಮೆ ಸಂಗಾತಿ ನಿಧನಕ್ಕೂ ಕಾರಣವಾಗುತ್ತದೆ.

ಮಂಗಳ ಒಂದು ಕ್ರೂರ ಗ್ರಹ. ವಿವಾಹದ ಮೇಲೆ ಇದ್ರ ಪ್ರಭಾವವಿರುವುದು ಸಾಮಾನ್ಯ ಸಂಗತಿ. ಜಾತಕದಲ್ಲಿ ಮಂಗಳ ದೋಷವಿದ್ದರೆ ಎಚ್ಚರ ವಹಿಸುವುದು ಬಹಳ ಮುಖ್ಯ. ಕೆಲವೊಮ್ಮೆ ಮಂಗಳ ದೋಷವೂ ಶುಭ ಫಲಗಳನ್ನು ನೀಡುವುದುಂಟು.

ಮಂಗಳ ಜಾತಕದಲ್ಲಿ ಪ್ರಥಮ ಸ್ಥಾನದಲ್ಲಿದ್ದರೆ ವ್ಯಕ್ತಿ ತುಂಬಾ ಸುಂದರವಾಗಿರುವುದಿಲ್ಲ. ತಾಯಿ ಹಾಗೂ ಸಂಗಾತಿ ಜೊತೆ ಕೆಟ್ಟದಾಗಿ ನಡೆಯುವಂತೆ ಪ್ರೇರೇಪಿಸುತ್ತಾನೆ. ವೈವಾಹಿಕ ಜೀವನದಲ್ಲಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

ಮಂಗಳ ನಾಲ್ಕನೇ ಸ್ಥಾನದಲ್ಲಿದ್ದರೆ ವೈವಾಹಿಕ ಜೀವನದ ಮೇಲೆ ಕಡಿಮೆ ಅಶುಭ ಪ್ರಭಾವ ಬೀರುತ್ತಾನೆ. ಇಂಥ ವ್ಯಕ್ತಿಗಳು ಶಕ್ತಿಶಾಲಿ ಹಾಗೂ ಆಕರ್ಷಕವಾಗಿರುತ್ತಾರೆ. ಬೇರೆಯವರನ್ನು ಬೇಗ ಆಕರ್ಷಿಸುತ್ತಾರೆ. ಇನ್ನಷ್ಟು ಬಲಪಡೆಯಲು ಹನುಮಂತನ ಮಂತ್ರ ಜಪಿಸಬೇಕು.

ಮಂಗಳ ದ್ವಾದಶ ಸ್ಥಾನದಲ್ಲಿದ್ರೆ ಸುಖ ಹಾಗೂ ವಿಲಾಸದ ಇಚ್ಛೆ ಹೆಚ್ಚಾಗುತ್ತದೆ. ಇಂಥವರು ಯಾವುದೇ ವಸ್ತು ಸಿಕ್ರೂ ತೃಪ್ತಿ ಹೊಂದುವುದಿಲ್ಲ. ವಿದೇಶದಲ್ಲಿ ವ್ಯಕ್ತಿ ಯಶಸ್ಸು ಗಳಿಸುತ್ತಾನೆ. ಅನೇಕ ಜನರನ್ನು ಆಕರ್ಷಿಸುವ ಶಕ್ತಿ ಆತನಿಗಿರುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...