ಅಮೆರಿಕ ನೌಕಾಪಡೆಯ ಪ್ರತಿಷ್ಠಿತ ಸಮರನೌಕೆ ಯುಎಸ್‌ಎಸ್ ಕಿಡ್ಡ್ ಫೇಸ್ಬುಕ್‌ನಲ್ಲಿ ಹೊಂದಿರುವ ಪೇಜ್ ಅನ್ನು ಹ್ಯಾಕ್ ಮಾಡಿದ ಕಿಡಿಗೇಡಿಗಳು ಆ ಪೇಜ್‌ನಲ್ಲಿ ಹತ್ತು ಗಂಟೆಗಳ ಕಾಲ ’ಏಜ್ ಆಫ್ ಎಂಪೈರ್ಸ್’ ಗೇಮ್ ಸ್ಟ್ರೀಮಿಂಗ್ ಮಾಡಿದ್ದಾರೆ.
ಫೇಸ್ಬುಕ್‌ನಲ್ಲಿರುವ ತನ್ನ ಪೇಜ್ ಮೇಲೆ ಅಮೆರಿಕ ನೌಕಾಪಡೆ ಇನ್ನೂ ಸಂಪೂರ್ಣ ಹಿಡಿತ ಸಾಧಿಸಿದಂತೆ ಕಾಣುತ್ತಿಲ್ಲ. ಘಟನೆ ಸಂಬಂಧ ಫೇಸ್ಬುಕ್‌ನೊಂದಿಗೆ ಸಂಪರ್ಕದಲ್ಲಿರುವ ನೌಕಾಪಡೆ, ಸಮಸ್ಯೆ ಬಗೆಹರಿಸುವ ಪ್ರಯತ್ನದಲ್ಲಿದೆ ಎಂದು ಕಮಾಂಡರ್ ನಿಕೋಲ್ ಶ್ವೆಮನ್ ತಿಳಿಸಿದ್ದಾರೆ.
ಅಧಿಕ ತೂಕದಿಂದ ಮುಜುಗರಕ್ಕೀಡಾಗ್ತಿದ್ದೀರಾ….? ಬೊಜ್ಜನ್ನು ಹೀಗೆ ಕಡಿಮೆ ಮಾಡಿ
ಎನ್ಸೆಂಬಲ್ ಸ್ಟುಡಿಯೋಸ್ ಅಭಿವೃದ್ಧಿಪಡಿಸಿದ ಗೇಮ್ ಅನ್ನು ರಿಯಲ್-ಟೈಮ್‌ನಲ್ಲಿ ಬಿತ್ತರಿಸಿದ ಈ ಹ್ಯಾಕರ್, ಪೇಜ್‌ನ ಉದ್ದೇಶವನ್ನೇ ಹೈಜಾಕ್ ಮಾಡಿ, ನೌಕೆಯ ಸ್ಟೇಟಸ್ ಹಾಗೂ ಲೊಕೇಷನ್ ಅನ್ನು ಕುಟುಂಬಗಳಿಗೆ ತಿಳಿಯಪಡಿಸುವುದರಿಂದ ’ಗೇಮಿಂಗ್ ವಿಡಿಯೋ ಕ್ರಿಯೇಟರ್’ನ ಉದ್ದೇಶಕ್ಕೆ ಬದಲಿಸಿದ್ದಾನೆ.
14 ವರ್ಷಗಳ ಹಿಂದೆ ಬಿಡುಗಡೆಯಾದ ಗೇಮ್ ಅನ್ನು ಆರು ಭಿನ್ನ ವಿಡಿಯೋಗಳ ಮೂಲಕ ಸ್ಟ್ರೀಮಿಂಗ್ ಮಾಡಿದ ಹ್ಯಾಕರ್ ನೆಟ್ಟಿಗರ ತಲೆಗಳಿಗೆ ಹುಳ ಬಿಟ್ಟಿದ್ದಾನೆ.