ಬೆಂಗಳೂರು: ನೈರುತ್ಯ ರೈಲ್ವೆ ಬೆಂಗಳೂರು ವಿಭಾಗದ ಬೆಳ್ಳಂದೂರು ಯಾರ್ಡ್ ಪುನರ್ ನಿರ್ಮಾಣಕ್ಕೆ ಇಂಜಿನಿಯರಿಂಗ್ ಕಾಮಗಾರಿ ಕೈಗೊಳ್ಳಲಿರುವ ಹಿನ್ನೆಲೆಯಲ್ಲಿ ಕೆಲವು ರೈಲುಗಳ ಸಂಚಾರವನ್ನು ತಾತ್ಕಾಲಿಕವಾಗಿ ರದ್ದು ಮಾಡಲಾಗಿದೆ.
ಡಿ. 5 ರಂದು ಯಶವಂತಪುರ -ಹೊಸೂರು ಮೆಮು(06203) ರೈಲು ರದ್ದುಗೊಳ್ಳಲಿದೆ.
ಡಿ. 5 ರಂದು ಕೊಯಮತ್ತೂರು -ಲೋಕಮಾನ್ಯ ತಿಲಕ್ ಟರ್ಮಿನಸ್ ಎಕ್ಸ್ ಪ್ರೆಸ್ ವಿಶೇಷ ರೈಲು(11014) ಮಾರ್ಗ ಮಧ್ಯದಲ್ಲಿ 90 ನಿಮಿಷ ನಿಲ್ಲಲಿದೆ.
ಯಶವಂತಪುರ -ಹೊಸೂರು ಮೆಮು ವಿಶೇಷ ರೈಲು(06393) ಮಾರ್ಗ ಮಧ್ಯದಲ್ಲಿ 60 ನಿಮಿಷ, ಯಶವಂತಪುರ -ಸೇಲಂ ಎಕ್ಸ್ ಪ್ರೆಸ್ ರೈಲು(16211) ಮಾರ್ಗ ಮಧ್ಯದಲ್ಲಿ 10 ನಿಮಿಷಗಳ ಕಾಲ ನಿಲ್ಲಲಿದೆ ಎಂದು ಹೇಳಲಾಗಿದೆ.