ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು ಮೈಕ್ರೋವೇವ್ ಗಳ ಮೂಲಕ ಆಹಾರ ತಯಾರಿಸುತ್ತಾರೆ. ಇದರಲ್ಲಿ ಅಡುಗೆಗಳನ್ನು ಸುಲಭವಾಗಿ, ಬಹಳ ಬೇಗನೆ ತಯಾರಿಸಬಹುದು. ಆದರೆ ಮೈಕ್ರೋವೇವ್ ನ ಬಗ್ಗೆ ಕೆಲವು ತಪ್ಪು ಕಲ್ಪನೆಗಳಿವೆ. ಅದು ಏನೆಂಬುದನ್ನು ತಿಳಿದುಕೊಳ್ಳೋಣ.
* ಮೈಕ್ರೋವೇವ್ ನಲ್ಲಿ ಆಹಾರ ಬೇಯಿಸಿದರೆ ಅದರ ಪೌಷ್ಟಿಕಾಂಶ ಕಡಿಮೆಯಾಗುತ್ತದೆ ಎಂದು ಹೇಳುತ್ತಾರೆ. ಆದರೆ ಆಹಾರವನ್ನು ಬಿಸಿ ಮಾಡಿದಾಗ ಅದರಲ್ಲಿರುವ ವಿಟಮಿನ್ ಸಿ, ಒಮೆಗಾ3 ಕೊಬ್ಬಿನಾಮ್ಲ, ಕೆಲವು ಅಂಶಗಳು ನಷ್ಟವಾಗುತ್ತವೆ. ಇದು ಮೈಕ್ರೋವೇವ್ ನಲ್ಲಿ ತಯಾರಿಸಿದ ಅಡುಗೆಯಲ್ಲಿ ಮಾತ್ರವಲ್ಲ ಗ್ಯಾಸ್, ಕಟ್ಟಿಗೆ ಒಲೆಯಲ್ಲಿ ತಯಾರಿಸಿದ ಅಡುಗೆಗೂ ಅನ್ವಯಿಸುತ್ತದೆ. ಉಳಿದ ಪೋಷಕಾಂಶಗಳು ಮೈಕ್ರೋವೇವ್ ನಲ್ಲಿ ತಯಾರಿಸಿದ ಆಹಾರದಲ್ಲಿ ಹಾಗೇ ಇರುತ್ತದೆ.
* ಮೈಕ್ರೋವೇವ್ ನಲ್ಲಿ ತಯಾರಿಸಿದ ಆಹಾರವನ್ನು ಸೇವಿಸಿದರೆ ಕ್ಯಾನ್ಸರ್ ಬರುತ್ತದೆ ಎಂಬ ತಪ್ಪು ಕಲ್ಪನೆ ಇದೆ. ಆದರೆ ಮೈಕ್ರೋವೇವ್ ನಲ್ಲಿ ಕಡಿಮೆ ಗುಣಮಟ್ಟದ ಪ್ಲಾಸ್ಟಿಕ್ ಪಾತ್ರೆಯನ್ನು ಬಳಸುವುದರಿಂದ ಅದರ ರಾಸಾಯನಿಕ ಆಹಾರದಲ್ಲಿ ಬೆರೆತು ಆರೋಗ್ಯ ಸಮಸ್ಯೆ ಉಂಟುಮಾಡಬಹುದು. ಆದ್ದರಿಂದ ನೀವು ಯಾವ ಪಾತ್ರೆಯಲ್ಲಿ ಆಹಾರವನ್ನು ಬಿಸಿ ಮಾಡುತ್ತಿದ್ದೀರಿ ಅಥವಾ ಅಡುಗೆ ಮಾಡುತ್ತೀದ್ದೀರಿ ಎಂಬ ಬಗ್ಗೆ ಕಾಳಜಿ ವಹಿಸಿ.