ಬೆಥೆಲ್ ಬ್ಯಾಪ್ಟಿಸ್ಟ್ ಪ್ರೌಢ ಶಾಲೆಯಲ್ಲಿ ನಡೆದ ದಾಳಿಯು ಕಳೆದ ಡಿಸೆಂಬರ್ನಿಂದ ಇಲ್ಲಿಯವರೆಗೆ ವಾಯುವ್ಯ ನೈಜೀರಿಯಾದಲ್ಲಿ ನಡೆದ 10ನೇ ಸಾಮೂಹಿಕ ಅಪಹರಣ ಪ್ರಕರಣವಾಗಿದೆ. ಸುಲಿಗೆ ಮಾಡುವ ಸಲುವಾಗಿ ದರೋಡೆಕೋರರು ಈ ರೀತಿ ಮಾಡ್ತಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮಕ್ಕಳ ಅಪಹರಣ ವಾರ್ತೆ ಕೇಳಿ ಕಂಗಾಲಾದ ಪೋಷಕರು ಶಾಲೆಯ ಕಾಂಪೌಂಡ್ ಬಳಿ ಜಮಾಯಿಸಿದ್ರು. ಮಕ್ಕಳಿಗಾಗಿ ಅಳುತ್ತಿದ್ದ ಪೋಷಕರ ಆಕ್ರಂದನ ಮುಗಿಲುಮುಟ್ಟಿತ್ತು.
ದೇವರು ಇವರ ಕಣ್ಣೀರನ್ನ ಆದಷ್ಟು ಬೇಗ ಕೊನೆಗಾಣಿಸಲಿ ಅಪಹರಣಕಾರರಿಂದ ಮಕ್ಕಳು ಆದಷ್ಟು ಬೇಗ ತಪ್ಪಿಸಿಕೊಂಡು ಬರಲಿ ಎಂದು ಮಹಿಳೆಯೊಬ್ಬರು ಹೇಳಿದ್ರು.
ರಾತ್ರಿಯಿಡೀ ಗುಂಡು ಹಾರಿಸಿದ ಬಂದೂಕುಧಾರಿಗಳು ವಸತಿ ಶಾಲೆಯ ಭದ್ರತಾ ಸಿಬ್ಬಂದಿಯನ್ನ ಮಣಿಸಿದ್ರು ಅನಿರ್ದಿಷ್ಟ ಸಂಖ್ಯೆಯ ವಿದ್ಯಾರ್ಥಿಗಳನ್ನ ಹತ್ತಿರದ ಕಾಡಿಗೆ ಕೊಂಡೊಯ್ದಿದ್ದಾರೆ. ಪ್ರಕರಣ ಸಂಬಂಧ ಮಹಿಳಾ ಶಿಕ್ಷಕಿ ಸೇರಿದಂತೆ 26 ಮಂದಿಯನ್ನ ರಕ್ಷಣೆ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.