ದಾಲ್ಚಿನ್ನಿ ಚಕ್ಕೆ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಇದನ್ನು ಯಾವ ಅಡುಗೆಯಲ್ಲಿ ಹಾಕಿದರೂ ಘಮಘಮಿಸುವ ಸುವಾಸನೆ ಬರುತ್ತದೆ. ಅಡುಗೆ ಮನೆಯಲ್ಲಿ ಈ ಚಕ್ಕೆ ಇದ್ದೇ ಇರುತ್ತದೆ. ದಾಲ್ಚಿನ್ನಿ ಚಕ್ಕೆ ಬಳಸಿ ಸೌಂದರ್ಯ ಹೇಗೆ ಕಾಪಾಡಿಕೊಳ್ಳಬೇಕು ಅನ್ನುವ ಮಾಹಿತಿ ಇಲ್ಲಿದೆ.
ಕೂದಲು ಉದುರುತ್ತಿದ್ದರೆ…..
ಕೂದಲು ಉದುರಿ ಬಕ್ಕತಲೆ ಆಗುತ್ತಿದ್ದರೆ, ಬಿಸಿ ಮಾಡಿದ ಆಲೀವ್ ಎಣ್ಣೆ, 1 ಟೀ ಸ್ಪೂನ್ ಜೇನು, 1 ಟೀ ಸ್ಪೂನ್ ದಾಲ್ಚಿನ್ನಿ ಚಕ್ಕೆ ಪುಡಿ ಬೆರೆಸಿ ಆ ಮಿಶ್ರಣವನ್ನು ಸ್ನಾನಕ್ಕೆ ಮುನ್ನ ತಲೆಗೆ ಹಚ್ಚಿ 15 ನಿಮಿಷಗಳ ನಂತರ ತಲೆಸ್ನಾನ ಮಾಡಬೇಕು.
ಮೊಡವೆ…..
ಮುಖದ ಮೇಲೆ ಮೊಡವೆಗಳಿದ್ದರೆ 3 ಟೇಬಲ್ ಸ್ಪೂನ್ ಜೇನು, 1 ಸ್ಪೂನ್ ದಾಲ್ಚಿನ್ನಿ ಚಕ್ಕೆ ಪುಡಿ ಬೆರೆಸಿ ಮಿಶ್ರಣ ಮಾಡಿಕೊಳ್ಳಬೇಕು. ಮಲಗುವ ಮುನ್ನ ಮಿಶ್ರಣವನ್ನು ಮೊಡವೆಗಳಿಗೆ ಹಚ್ಚಿ ಮಾರನೆಯ ದಿನ ನಿದ್ರೆಯಿಂದ ಎದ್ದ ಬಳಿಕ ಉಗುರು ಬೆಚ್ಚನೆಯ ನೀರಿನಿಂದ ಮುಖ ತೊಳೆಯಬೇಕು.
ಚರ್ಮದ ಇನ್ಫೆಕ್ಷನ್…..
ಚರ್ಮದ ಮೇಲೆ ಇನ್ಫೆಕ್ಷನ್ ನಿಂದ ಉಂಟಾಗುವ ಎಕ್ಸಿಮಾ, ಹುಳುಕಡ್ಡಿ ಮುಂತಾದ ಚರ್ಮವ್ಯಾಧಿಗಳಿಗೆ ಜೇನು ಮತ್ತು ದಾಲ್ಚಿನ್ನಿ ಚಕ್ಕೆ ಪುಡಿ ಸಮಪ್ರಮಾಣದಲ್ಲಿ ತೆಗೆದುಕೊಂಡು ಹಚ್ಚಬೇಕು.