ಕ್ಯಾಲಿಫೋರ್ನಿಯಾ: ಸಾಮಾನ್ಯವಾಗಿ 10 ಅಡಿ ಮೇಲಿಂದ ಕೆಳಕ್ಕೆ ಬಿದ್ದರೆ ಅಪಾಯ ಗ್ಯಾರಂಟಿ. ಹಲವರು ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಅಂಥದ್ರಲ್ಲಿ ಪ್ಯಾರಾಚೂಟ್ ಕೈಕೊಟ್ಟರೂ 15,000 ಅಡಿ ಮೇಲಿಂದ ಕೆಳಕ್ಕೆ ಬಿದ್ದು ಅಪಾಯದಿಂದ ಪಾರಾಗಿದ್ದಾನೆ ಬ್ರಿಟೀಷ್ ಸೈನಿಕ.
ಹೌದು, ಸೈನಿಕನೊಬ್ಬ ತರಬೇತಿಯ ವೇಳೆ ಪವಾಡ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ.
ನಿಮ್ಮ ನೆಚ್ಚಿನ ವಜ್ರದ ಆಭರಣಗಳನ್ನು ಈ ರೀತಿಯಲ್ಲಿ ಸ್ವಚ್ಛಗೊಳಿಸಿ
ವರದಿಗಳ ಪ್ರಕಾರ, ಸೈನಿಕನಲ್ಲಿದ್ದ ಪ್ಯಾರಾಚೂಟ್ ಸರಿಯಾದ ಸಮಯಕ್ಕೆ ತೆರೆಯಲಿಲ್ಲವಾದ್ದರಿಂದ 15,000 ಅಡಿಗಳ ಮೇಲಿಂದ ಕೆಳಕ್ಕೆ ಧುಮುಕಿದ್ದಾನೆ. ಮನೆಯ ಮೇಲ್ಛಾವಣಿಯಿಂದ ಕೆಳಕ್ಕೆ ಬಿದ್ದಿರುವ ಸೈನಿಕ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈತ ಮಧ್ಯ ಕ್ಯಾಲಿಫೋರ್ನಿಯಾದ ರಾಬರ್ಟ್ಸ್ ಕೇಂದ್ರದಲ್ಲಿ ತರಬೇತಿ ಪಡೆಯುತ್ತಿದ್ದ ಎನ್ನಲಾಗಿದೆ.
ಇನ್ನು 15,000 ಅಡಿ ಎತ್ತರದಿಂದ ಕೆಳಕ್ಕೆ ಬಿದ್ದಿದ್ದರೂ ಗಂಭೀರ ಗಾಯಗಳಾಗಿಲ್ಲ, ಇದು ನಿಜಕ್ಕೂ ಪವಾಡವೇ ಸರಿ ಎಂದು ಸ್ಥಳೀಯರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಸೈನಿಕನಿಗೆ ಚಿಕ್ಕ-ಪುಟ್ಟ ಗಾಯಗಳಾಗಿದ್ದು, ಕೂಡಲೇ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು.