ರಾಮನಗರ: ಹಣಕಾಸಿನ ತೊಂದರೆಯ ಕಾರಣ ಕಿಡ್ನಿ ಮಾರಾಟ ಮಾಡಿದ್ದ ಮಹಿಳೆಗೆ ನಿನ್ನ ಪುತ್ರಿಯ ಕಿಡ್ನಿಯನ್ನೂ ಮಾರಾಟ ಮಾಡಬೇಕು. ಇಲ್ಲದಿದ್ದರೆ ಕಿಡ್ನಿ ಮಾರಿದ ಹಣವನ್ನು ವಾಪಸ್ ಕೊಡು ಎಂದು ವ್ಯಕ್ತಿಯೊಬ್ಬ ಬೆದರಿಕೆ ಹಾಕಿದ ಘಟನೆ ರಾಮನಗರ ಜಿಲ್ಲೆ ಮಾಗಡಿಯಲ್ಲಿ ನಡೆದಿದೆ.
ತಿರುಮಲೆ ನಿವಾಸಿ ಮಹಿಳೆಯ ಪತಿ 11 ವರ್ಷಗಳ ಹಿಂದೆ ಮೃತಪಟ್ಟಿದ್ದಾರೆ. ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಮೂರು ವರ್ಷದ ಹಿಂದೆ ಹಣಕಾಸಿನ ತೊಂದರೆಯ ಕಾರಣ 2.50 ಲಕ್ಷ ರೂ.ಗೆ ಕಿಡ್ನಿ ಮಾರಾಟ ಮಾಡಿದ್ದಾರೆ. ಕಿಡ್ನಿ ಮಾರಾಟಕ್ಕೆ ಸಹಾಯ ಮಾಡಿದ್ದ ಮಂಜುನಾಥ್ ನಿನ್ನ ಮಗಳಿಂದಲೂ ಕಿಡ್ನಿಯನ್ನು ಕೊಡಿಸು. ಇಲ್ಲವಾದರೆ ಹಣ ವಾಪಸ್ ಕೊಡು ಎಂದು ಕಿರುಕುಳ ನೀಡುತ್ತಿದ್ದಾನೆ.
ಹಣ ಕೊಡದಿದ್ದಲ್ಲಿ ಕಿಡ್ನಿ ಮಾರಾಟ ಮಾಡಿದ ಬಗ್ಗೆ ಹೇಳಿ ಮಾನ ಕಳೆಯುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ. ನೋಂದ ಮಹಿಳೆ ದೂರು ನೀಡಿದ್ದಾರೆ.