ಬೆಂಗಳೂರಿನ ಯಶವಂತಪುರದಲ್ಲಿರುವ ಬ್ರಿಗೇಡ್ ಗೇಟ್ ವೇ ಅಪಾರ್ಟ್ ಮೆಂಟ್ ಮೇಲ್ಛಾವಣಿಯಲ್ಲಿ ಬೃಹತ್ ಸೌರ ವಿದ್ಯುತ್ ಸ್ಥಾವರನ್ನು ನಿರ್ಮಿಸಲಾಗಿದೆ. ಅಪಾರ್ಟ್ಮೆಂಟ್ ನಿವಾಸಿಗಳ ಸಂಘವು ಗ್ರೀನ್ ಇನಿಶಿಯೇಟಿವ್ ಯೋಜನೆಯಡಿಯಲ್ಲಿ ಕ್ರಾಂತಿಕಾರಿ ಕಾರ್ಯಕ್ಕೆ ಕೈ ಹಾಕಿದೆ. ರೆನ್ ಎಕ್ಸೆಲ್ ಇಕೊಟೆಕ್ ಸಂಸ್ಥೆಯು ನಿರ್ಮಾಣ ಮಾಡಿರುವ ಬೃಹತ್ ಸೌರ ವಿದ್ಯುತ್ ಸ್ಥಾವರನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಉನ್ನತ ಶಿಕ್ಷಣ ಸಚಿವರಾದ ಡಾ. ಸಿ.ಎನ್. ಅಶ್ವಥ ನಾರಾಯಣ ಉದ್ಘಾಟಿಸಿದ್ರು.
ನಂತ್ರ ಮಾತನಾಡಿದ ಅವರು,ಸಮಾಜಕ್ಕೆ ಒಳ್ಳೆ ಸಂದೇಶ ಕೊಡುವ ಕೆಲಸ ಬ್ರಿಗೇಡ್ ಗೇಟ್ ವೇ ಜನ ಮಾಡುತ್ತಿದ್ದಾರೆ.ಪ್ರಕೃತಿಯನ್ನು ಕಾಪಾಡುವುದು, ನೀರನ್ನು ರೀಸೈಕಲ್ , ಕಸವನ್ನು ರೀಸೈಕಲ್ ಮಾಡುತ್ತಿದ್ದಾರೆ. ಅದಲ್ಲದೆ ಕರೆಂಟ್ ಉತ್ಪಾದನೆ ಮಾಡುತ್ತಿದ್ದಾರೆ. ಭಾರತದಲ್ಲಿ ಅತಿ ಹೆಚ್ಚು ಕರೆಂಟ್ ಉತ್ಪಾದನೆ ಮಾಡುತ್ತಿರುವ ಅಪಾರ್ಟ್ ಮೆಂಟ್ ಇದು ಎಂದರು.
ಬಳಿಕ ರೆನ್ಎಕ್ಸ್ ಸೋಲ್ ಇಕೋಟೆಕ್ ಸಂಸ್ಥೆಯ ಮಾಲೀಕರು ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್ ಶ್ರೀನಿವಾಸ್ ಕುಮಾರ್, ಬ್ರಿಗೇಡ್ ಗೇಟ್ ವೇ ಅಪಾರ್ಟ್ ಮೆಂಟ್ ಮಾಲೀಕರ ಸಂಘದ ಕಾರ್ಯವನ್ನು ಶ್ಲಾಘಿಸಿದ್ರು. ಅಪಾರ್ಟ್‌ಮೆಂಟ್ ಸಂಘದ ಜೊತೆ ಪಾಲುದಾರಿಕೆ ಹೊಂದಿದ್ದಕ್ಕೆ ತಮಗೆ ಸಂತೋಷವಾಗಿದೆ ಎಂದರು.
ಕೋವಿಡ್,ಲಾಕ್‌ಡೌನ್‌ಗಳ ಹೊರತಾಗಿಯೂ 45-75 ದಿನಗಳ ದಾಖಲೆಯ ಅವಧಿಯಲ್ಲಿ ಇದನ್ನು ಪೂರ್ಣಗೊಳಿಸಲಾಗಿದೆ. 1255 ಅಪಾರ್ಟ್‌ಮೆಂಟ್‌ಗಳನ್ನು ಒಳಗೊಂಡ 13ಕ್ಕೂ ಹೆಚ್ಚು ವಸತಿ ಗೋಪುರಗಳಿರುವ ಬ್ರಿಗೇಡ್ ಗೇಟ್‌ವೇ ಅಪಾರ್ಟ್‌ಮೆಂಟ್‌ಗಳ ಈ ಸೋಲಾರ್ ಮೇಲ್ಛಾವಣಿಯ ಸ್ಥಾಪನೆ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಆಗಿದೆ. ಇದು ಬೃಹತ್ ಸೋಲಾರ್ ಪ್ಲಾಂಟ್ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.
ಇದು ವಿದ್ಯುತ್ ಬಿಲ್ ಉಳಿತಾಯದ ಜೊತೆಗೆ ಮುಂದಿನ ಪೀಳಿಗೆಯ ಮಕ್ಕಳ ಭವಿಷ್ಯವನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಇದು ಪರೋಕ್ಷವಾಗಿ “ಇಂಧನ ಉಳಿತಾಯ, ನವೀಕರಿಸಬಹುದಾದ ಇಂಧನ ಉತ್ಪಾದಿನೆ” ಪರಿಕಲ್ಪನೆಯನ್ನು ಜಾರಿಗೆ ತಂದಿದೆ.