ಬೆಂಗಳೂರು: ಇಂದು ಸಂಜೆ 5 ಗಂಟೆಯಿಂದ ರಾಜ್ಯದ ವಿವಿಧೆಡೆ ಸೂರ್ಯಗ್ರಹಣ ಗೋಚರಿಸಲಿದೆ. ಬರಿಗಣ್ಣಿನಿಂದ ಗ್ರಹಣ ವೀಕ್ಷಿಸಬೇಡಿ. ನೇರವಾಗಿ ಗ್ರಹಣ ವೀಕ್ಷಿಸುವುದು ಕಣ್ಣಿಗೆ ಅಪಾಯಕಾರಿ ಎಂದು ಹೇಳಲಾಗಿದೆ.
ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ಬಂದಾಗ ಸೂರ್ಯಗ್ರಹಣ ಸಂಭವಿಸುತ್ತದೆ. ಸೂರ್ಯನಿಗೆ ಪೂರ್ಣ ಪ್ರಮಾಣದಲ್ಲಿ ಚಂದ್ರ ಅಡ್ಡವಾಗಿ ಬಂದರೆ ಖಗ್ರಾಸ ಸೂರ್ಯಗ್ರಹಣವೆನ್ನಲಾಗುತ್ತದೆ. ಈ ಬಾರಿ ಸ್ವಲ್ಪ ಭಾಗ ಮಾತ್ರ ಅಡ್ಡ ಬರುವುದರಿಂದ ಪಾರ್ಶ್ವ ಸೂರ್ಯಗ್ರಹಣ ಸಂಭವಿಸಲಿದೆ. 27 ವರ್ಷಗಳ ನಂತರ ಕೇತುಗ್ರಸ್ತ ಸೂರ್ಯಗ್ರಹಣ ಸಂಭವಿಸುತ್ತಿದೆ.
ಬೆಂಗಳೂರಿನಲ್ಲಿ ಸಂಜೆ 5:12 ರಿಂದ 5:49 ರವರೆಗೆ, ಧಾರವಾಡದಲ್ಲಿ ಸಂಜೆ 5 1 ರಿಂದ 5:47 ರವರೆಗೆ, ರಾಯಚೂರಿನಲ್ಲಿ ಸಂಜೆ 5.01 ರಿಂದ 5.47 ರವರೆಗೆ, ಬಳ್ಳಾರಿಯಲ್ಲಿ 5.4ರಿಂದ 5.48 ರವರೆಗೆ, ಬಾಗಲಕೋಟೆಯಲ್ಲಿ ಸಂಜೆ 5 ರಿಂದ 5:47 ರವರೆಗೆ, ಮಂಗಳೂರಿನಲ್ಲಿ ಸಂಜೆ 5.10 ರಿಂದ 5.50 ರವರೆಗೆ, ಕಾರವಾರದಲ್ಲಿ ಸಂಜೆ 5 ರಿಂದ 5.48 ರವರೆಗೆ ಗ್ರಹಣ ಗೋಚರಿಸಲಿದೆ. ಸೌರ ಕನ್ನಡಕ ಬಳಸಿ ಗ್ರಹಣ ವೀಕ್ಷಿಸಬಹುದು. ಬರಿಗಣ್ಣಿನಿಂದ ನೋಡುವುದು ಅಪಾಯಕಾರಿಯಾಗಿದೆ.