
ನವದೆಹಲಿ: ಭಾರತದಲ್ಲಿ ಮೊದಲಿಗೆ ಅಮೃತಸರದಲ್ಲಿ ಗ್ರಹಣ ಗೋಚರವಾಗಿದೆ. ಸಂಜೆ 4 ಗಂಟೆ 19 ನಿಮಿಷಕ್ಕೆ ಗ್ರಹಣ ಗೋಚರಿಸಿದೆ.
ಅಮೃತಸರದ ನಂತರ ದೆಹಲಿಯಲ್ಲಿಯೂ ಗ್ರಹಣ ಗೋಚರಿಸಿದೆ. ಸಂಜೆ 4 ಗಂಟೆ 20 ನಿಮಿಷಕ್ಕೆ ದೆಹಲಿಯಲ್ಲಿ ಸೂರ್ಯಗ್ರಹಣ ಗೋಚರವಾಗಿದೆ. ಹರಿದ್ವಾರ, ಕುರುಕ್ಷೇತ್ರದಲ್ಲೂ ಸೂರ್ಯಗ್ರಹಣ ಗೋಚರವಾಗಿದೆ.
ಜಮ್ಮು, ಶ್ರೀನಗರ, ನೋಯ್ಡಾದಲ್ಲಿಯೂ ಸೂರ್ಯಗ್ರಹಣ ಗೋಚರಿಸಿದೆ. ಹೃಷಿಕೇಶ್, ಭೂಪಾಲ್, ಮುಂಬೈ, ಕೊಲ್ಕತ್ತಾ, ಅಹಮದಾಬಾದ್, ಲಕ್ನೋ, ಜೈಪುರ್ ಪಾಟ್ನಾದಲ್ಲಿಯೂ ಸೂರ್ಯಗ್ರಹಣ ಗೋಚರವಾಗಿದೆ.
ನಂದಿಬೆಟ್ಟಕ್ಕೆ ಜನರ ಲಗ್ಗೆ
ಸೂರ್ಯ ಗ್ರಹಣ ವೀಕ್ಷಿಸಲು ಪ್ರವಾಸಿಗರು ನಂದಿ ಬೆಟ್ಟಕ್ಕೆ ದೌಡಾಯಿಸಿದ್ದಾರೆ. ಸಾವಿರಾರು ಸಂಖ್ಯೆಯ ಪ್ರವಾಸಿಗರು ನಂದಿ ಬೆಟ್ಟದ ಮೇಲೆ ಜಮಾಯಿಸಿದ್ದಾರೆ, ಚಿಕ್ಕಬಳ್ಳಾಪುರ ಬೆಂಗಳೂರಿನಿಂದ ಭಾರೀ ಸಂಖ್ಯೆಯ ಪ್ರವಾಸಿಗರು ನಂದಿಬೆಟ್ಟಕ್ಕೆ ಆಗಮಿಸಿದ್ದಾರೆ. ಬೆಟ್ಟದ ಮೇಲಿರುವ ದೇವಾಲಯವನ್ನು ಬಂದ್ ಮಾಡಲಾಗಿದೆ.