ಬೆಂಗಳೂರು: ಸೂರ್ಯ ಗ್ರಹಣದ ವೇಳೆಯಲ್ಲಿಯೇ ಹಲವು ಕಡೆಗಳಲ್ಲಿ ಆಹಾರ ಸೇವನೆ ಮಾಡಲಾಗಿದೆ. ಬೆಂಗಳೂರಿನಲ್ಲಿ ಗ್ರಹಣದ ಸಂದರ್ಭದಲ್ಲಿ ಉಪಹಾರ ಸೇವನೆ ಮಾಡಲಾಗಿದೆ.
ಮೂಢನಂಬಿಕೆ ವಿರೋಧಿ ವೇದಿಕೆ ಸದಸ್ಯರು ಉಪಹಾರ ಸೇವನೆ ಮಾಡಿದ್ದಾರೆ. ಹಣ್ಣು, ತಿಂಡಿ ಸೇವಿಸಿ ಮೌಲ್ಯಕ್ಕೆ ಸೆಡ್ಡು ಹೊಡೆದಿದ್ದಾರೆ. ಗ್ರಹಣಗಳ ಹೆಸರಲ್ಲಿ ಮೌಢ್ಯ ಬಿತ್ತುವ ಕೆಲಸ ಮಾಡಲಾಗುತ್ತಿದೆ. ಗ್ರಹಣಗಳ ಬಗ್ಗೆ ಜನರು ಆತಂಕಪಡುವುದು ಬೇಡ ಎಂದು ಮೂಢನಂಬಿಕೆ ವಿರೋಧಿ ವೇದಿಕೆಯ ನರಸಿಂಹಮೂರ್ತಿ ಹೇಳಿದ್ದಾರೆ.
ಕಲಬುರ್ಗಿಯಲ್ಲಿ ಗ್ರಹಣದ ಸಮಯದಲ್ಲಿ ಉಪಾಹಾರ ಸೇವನೆ ಮಾಡಲಾಗಿದೆ. ಜ್ಞಾನ ವಿಜ್ಞಾನ ಸಮಿತಿಯಿಂದ ಉಪಹಾರ ಕೂಟ ಆಯೋಜನೆ ಮಾಡಲಾಗಿದೆ. ಕಲಬುರ್ಗಿಯ ಜಗತ್ ವೃತದಲ್ಲಿ ಉಪಹಾರ ಸೇವಿಸಿದ್ದು, ಗ್ರಹಣದ ಸಮಯದಲ್ಲಿ ಏನನ್ನೂ ತಿನ್ನಬಾರದು ಎನ್ನುವುದು ಮೌಢ್ಯ. ಮೌಡ್ಯ ವಿರೋಧಿಸಿ ಜ್ಞಾನ ವಿಜ್ಞಾನ ಸಮಿತಿಯಿಂದ ಉಪಹಾರ ಕೂಟ ಆಯೋಜಿಸಲಾಗಿದೆ.
ಶಿವಮೊಗ್ಗದ ಫ್ರೀಡಂ ಪಾರ್ಕ್ ನಲ್ಲಿ ಕರ್ನಾಟಕ ವಿಜ್ಞಾನ ಪರಿಷತ್ ಶಿವಮೊಗ್ಗ ಘಟಕ, ಭದ್ರಾವತಿಯ ಹವ್ಯಾಸಿ ಖಗೋಳ ವೀಕ್ಷಕ ಹರೋನಹಳ್ಳಿ ಸ್ವಾಮಿ ಮತ್ತು ಯೂಥ್ ಹಾಸ್ಟೆಲ್ ಶಿವಮೊಗ್ಗ ತರುಣೋದಯ ಘಟಕ, ರೋ.ಪೂರ್ವ ವತಿಯಿಂದ ಸೂರ್ಯ ಗ್ರಹಣ ವೀಕ್ಷಣೆ ಏರ್ಪಡಿಸಲಾಗಿತ್ತು. ಟೆಲಿಸ್ಕೋಪ್, ಸೌರ ಕನ್ನಡಕಗಳ ಮೂಲಕ ಗ್ರಹಣ ವೀಕ್ಷಣೆ ಮಾಡಲಾಯಿತು. ಮೂಢನಂಬಿಕೆಯನ್ನು ತೊಡೆದು ಹಾಕಲು ಗ್ರಹಣದ ಸಮಯದಲ್ಲಿ ತಿಂಡಿ ತಿನ್ನುವ ಮೂಲಕ ಗ್ರಹಣ ವೀಕ್ಷಣೆ ಮಾಡಲಾಯಿತು.