ಶನಿವಾರ ವರ್ಷದ ಕೊನೆಯ ಸೂರ್ಯಗ್ರಹಣ ಸಂಭವಿಸಲಿದೆ.
ಸೂರ್ಯಗ್ರಹಣದ ಅವಧಿಯು ನಾಲ್ಕು ಗಂಟೆಗಳಿಗಿಂತ ಹೆಚ್ಚಿರಲಿದೆ. ಸೂರ್ಯಗ್ರಹಣ ಭಾರತದಲ್ಲಿ ಗೋಚರಿಸದಿದ್ದರೂ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅದರ ಪ್ರಭಾವ ಭಾರತದ ಮೇಲಾಗಲಿದೆ.
ರಾಹು ಮತ್ತು ಕೇತುಗಳ ಅಶುಭ ಪರಿಣಾಮಗಳಿಂದ ಸೂರ್ಯಗ್ರಹಣ ಸಂಭವಿಸಿದಂತೆ, ಜಾತಕದಲ್ಲಿಯೂ ರಾಹು-ಕೇತುಗಳ ಅಶುಭ ಪರಿಣಾಮಗಳು ಸೃಷ್ಟಿಯಾಗುತ್ತವೆ. ಈ ದೋಷವು ಮಾನವನ ಜೀವನದ ಮೇಲೆ ನೇರ ಪರಿಣಾಮ ಬೀರುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಣ ದೋಷ ನಿವಾರಣೆಗೆ ಸೂರ್ಯಗ್ರಹಣದ ದಿನ ವಿಶೇಷ ಕೆಲಸ ಮಾಡಬೇಕಾಗುತ್ತದೆ.
ಜಾತಕದಲ್ಲಿ ಪಿತೃ ದೋಷ ಅಥವಾ ಗ್ರಹಣ ದೋಷವಿದ್ದರೆ ಸೂರ್ಯಗ್ರಹಣದ ದಿನ ಕಪ್ಪು ಎಳ್ಳು, ಬೆಲ್ಲ, ಗೋಧಿಯನ್ನು ದಾನ ಮಾಡಬೇಕು.ಜಾತಕದಲ್ಲಿ ಸೂರ್ಯಗ್ರಹಣ ದೋಷ ತಪ್ಪಿಸಲು ಅಶ್ವತ್ಥ ಗಿಡ ನೆಡಬೇಕು. ಪ್ರತಿದಿನ ಅದಕ್ಕೆ ನೀರು ಹಾಕಬೇಕು.
ಗ್ರಹಣ ದೋಷವಿದ್ದಲ್ಲಿ, ಗ್ರಹಣದ ದಿನ ಯಾರಿಂದಲೂ ದಾನ ಪಡೆಯಬಾರದು. ವಿಕಲಾಂಗರಿಗೆ ದಾನ ಮಾಡಬೇಕು. ಇದಲ್ಲದೆ ಆದಿತ್ಯ ಹೃದಯ ಸ್ತೋತ್ರವನ್ನು ಪಠಿಸಿಬೇಕು. ಸೂರ್ಯೋದಯಕ್ಕೆ ಮೊದಲು ಸ್ನಾನ ಮಾಡಿ, ತಾಮ್ರದ ಪಾತ್ರೆಯಿಂದ ಉದಯಿಸುತ್ತಿರುವ ಸೂರ್ಯನನ್ನು ನೋಡಬೇಕು.
ಜಾತಕದ ಸೂರ್ಯಗ್ರಹಣ ದೋಷವಿದ್ದರೆ ತಂದೆ ಜೊತೆ ಜಗಳವಾಗಬಹುದು. ಆರೋಗ್ಯ ಸಮಸ್ಯೆ ಕಾಡಬಹುದು. ಮೂಳೆಗಳಿಗೆ ಸಂಬಂಧಿಸಿದ ರೋಗ ಕಾಡಬಹುದು. ಸರ್ಕಾರಿ ಕೆಲಸಗಳಲ್ಲಿ ಸಮಸ್ಯೆಯಾಗಬಹುದು.