
ವರ್ಷದ ಕೊನೆಯ ಸೂರ್ಯಗ್ರಹಣ ಇಂದು ಬೆಳಿಗ್ಗೆ 11 ಗಂಟೆ 59 ಕ್ಕೆ ಶುರುವಾಗಲಿದೆ. ಮಧ್ಯಾಹ್ನ 3 ಗಂಟೆ 7 ನಿಮಿಷಕ್ಕೆ ಮುಕ್ತಾಯವಾಗಲಿದೆ. ಸೂರ್ಯಗ್ರಹಣ ಭಾರತದಲ್ಲಿ ಗೋಚರಿಸುತ್ತಿಲ್ಲ. ಹಾಗಾಗಿ ಭಾರತೀಯರಿಗೆ ಸೂತಕ ತಟ್ಟುವುದಿಲ್ಲ. ಆದ್ರೆ ಗ್ರಹಣ, ರಾಶಿಗಳ ಮೇಲೆ ಪರಿಣಾಮ ಬೀರಲಿದೆ. ಶನಿವಾರದ ಅಮವಾಸ್ಯೆಯಲ್ಲಿ ಸಂಭವಿಸುತ್ತಿರುವ ಸೂರ್ಯಗ್ರಹಣ ನಾಲ್ಕು ರಾಶಿಗಳ ಮೇಲೆ ಪ್ರಭಾವ ಬೀರಲಿದೆ.
ವೃಷಭ: ವೃಷಭ ರಾಶಿಯವರಿಗೆ ಗ್ರಹಣವು ಶುಭಕರವಾಗಿದೆ. ರಾಜಕೀಯ ಕ್ಷೇತ್ರದಲ್ಲಿ ಯಶಸ್ಸು ಲಭಿಸಲಿದೆ. ವ್ಯಾಪಾರದಲ್ಲಿ ಶುಭ ಫಲ ಪ್ರಾಪ್ತಿಯಾಗಲಿದ್ದು, ಸಾಲದಿಂದ ಮುಕ್ತಿ ಸಿಗಲಿದೆ.
ಮಿಥುನ: ಸೂರ್ಯಗ್ರಹಣ ಮಿಥುನ ರಾಶಿಯವರಿಗೆ ಮಂಗಳಕರವಾಗಿದೆ. ವಿವಾದದಿಂದ ಮುಕ್ತಿ ಸಿಗಲಿದ್ದು, ಕೆಲಸ ಕೈಗೂಡಲಿದೆ.
ಕರ್ಕಾಟಕ: ಈ ರಾಶಿಯವರಿಗೆ ಗ್ರಹಣವು ಅಶುಭ ಫಲ ನೀಡಲಿದೆ. ಮಗುವಿನ ಬಗ್ಗೆ ಹೆಚ್ಚು ಕಾಳಜಿಯ ಅಗತ್ಯವಿದೆ. ಸ್ನೇಹಿತರ ಜೊತೆ ಜಗಳವಾಗುವ ಸಾಧ್ಯತೆಯಿದೆ.
ಸಿಂಹ: ಸಿಂಹ ರಾಶಿಯವರಿಗೆ ಸೂರ್ಯಗ್ರಹಣ ಶುಭ ಫಲ ನೀಡಲಿದೆ. ಆರ್ಥಿಕ ಲಾಭ ಸಿಗಲಿದೆ. ಜಮೀನು ಮತ್ತು ಮನೆಗೆ ಸಂಬಂಧಿಸಿದ ವಿವಾದ ಬಗೆಹರಿಯಲಿದೆ.
ಕನ್ಯಾ: ಈ ರಾಶಿಯವರಿಗೆ ಗ್ರಹಣ ಮಂಗಳಕರವಾಗಿರಲಿದೆ. ಶಕ್ತಿ, ಧೈರ್ಯ ಹೆಚ್ಚಾಗಲಿದೆ. ಹಣಕಾಸಿನ ನೆರವು ಸಿಗಲಿದೆ.
ತುಲಾ ರಾಶಿ : ಈ ಸೂರ್ಯಗ್ರಹಣ ತುಲಾ ರಾಶಿಯವರಿಗೆ ಅಶುಭವಾಗಿರಲಿದೆ. ಮಾತಿನಲ್ಲಿ ಎಚ್ಚರಿಕೆ ಅಗತ್ಯ. ವ್ಯಕ್ತಿಯೊಂದಿಗೆ ವಿವಾದವಾಗುವ ಸಾಧ್ಯತೆಯಿದೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.
ವೃಶ್ಚಿಕ : ಈ ರಾಶಿಯಲ್ಲಿ ಸೂರ್ಯಗ್ರಹಣ ಸಂಭವಿಸಲಿದೆ. ಮನಸ್ಸು ವಿಚಲಿತವಾಗಿರಲಿದೆ. ಗ್ರಹಣದ ನಂತರವೂ ಉದ್ವೇಗ ಉಳಿಯಲಿದೆ.
ಧನು : ಗ್ರಹಣ ಅಶುಭ ಪರಿಣಾಮ ಬೀರಲಿದೆ. ಹೆಚ್ಚು ಹಣ ಖರ್ಚಾಗಲಿದೆ. ವಿದೇಶ ಪ್ರಯಾಣದ ಯೋಗವಿದ್ದು, ಅನಗತ್ಯ ಓಡಾಟವಾಗುವ ಸಾಧ್ಯತೆಯಿದೆ.
ಮಕರ : ಗ್ರಹಣದ ಶುಭ ಪ್ರಭಾವದಿಂದ ವ್ಯಾಪಾರದಲ್ಲಿ ಪ್ರಗತಿ ಕಂಡು ಬರಲಿದೆ. ಉದ್ಯೋಗದಲ್ಲಿ ಬಡ್ತಿ ಸಿಗಲಿದೆ. ಆರ್ಥಿಕ ಲಾಭವಾಗಲಿದೆ.
ಕುಂಭ : ಸಾಮಾಜಿಕ ಕಾರ್ಯಗಳಲ್ಲಿ ಗೌರವ ಲಭಿಸಲಿದೆ. ಭೂಮಿ ಮತ್ತು ಮನೆಗೆ ಸಂಬಂಧಿಸಿದ ಸಮಸ್ಯೆ ಬಗೆಹರಿಯಲಿದೆ.
ಮೀನ : ಗ್ರಹಣ ಈ ರಾಶಿಯವರಿಗೆ ಅಶುಭವಾಗಿರಲಿದೆ. ಉದ್ಯೋಗ ಬದಲಾವಣೆ ಸಾಧ್ಯತೆಯಿದೆ. ತಂದೆ ಜೊತೆ ವಿವಾದವಾಗುವ ಸಾಧ್ಯತೆಯಿದೆ.