ಆರ್.ಎಸ್.ಎಸ್. ಬಗ್ಗೆ ಸಿದ್ದರಾಮಯ್ಯನಂತಹ ಮೀರ್ ಸಾದಿಕ್ಗೆ ಹೇಗೆ ಗೊತ್ತಾಗಬೇಕು ಎಂದು ಪ್ರಶ್ನಿಸುವ ಮೂಲಕ ವಿಪಕ್ಷ ನಾಯಕನ ತಾಲಿಬಾನ್ ಹೇಳಿಕೆಗೆ ಸೊಗಡು ಶಿವಣ್ಣ ತಿರುಗೇಟು ನೀಡಿದ್ದಾರೆ. ತುಮಕೂರಿನಲ್ಲಿ ಮಾತನಾಡಿದ ಅವರು ಸ್ವಾತಂತ್ರ್ಯ ಸಮಯದಲ್ಲಿ ಆರ್.ಎಸ್.ಎಸ್.ನವರೂ ಜೈಲಿಗೆ ಹೋಗಿದ್ದರು. ಸ್ವಾತಂತ್ರ್ಯ ಬಂದ ಮೂರೇ ತಿಂಗಳಲ್ಲಿ ಪಾಕಿಸ್ತಾನದವರು ಕಾಶ್ಮೀರ ನಮ್ಮದು ಎಂದರು. ರಾಜಾ ಹರಿಸಿಂಗ್ ಇನ್ನೂ ಬಿಟ್ಟುಕೊಟ್ಟಿರಲಿಲ್ಲ. ಅಷ್ಟರಲ್ಲೇ ಸ್ವಯಂ ಸೇವಕರು ಅಲ್ಲಿಗೆ ಹೋಗಿದ್ದರು. ದೇಶದಲ್ಲಿ ಆಪತ್ತು ಬಂದಾಗಲೆಲ್ಲ ಆರ್.ಎಸ್.ಎಸ್.ನವರು ಕೆಲಸ ಮಾಡಿದ್ದಾರೆ ಎಂದು ಗುಡುಗಿದ್ದಾರೆ.
ಮೀರ್ ಸಾದಿಕ್ ಸಿದ್ದರಾಮಯ್ಯ ಮಾನ ಮರ್ಯಾದೆ ಇದ್ದಿದ್ದರೆ ಇಂತಹ ಮಾತುಗಳನ್ನು ಆಡುತ್ತಿರಲಿಲ್ಲ. ದೇಶ ವಿಭಜನೆ ಇನ್ನೂ ಎಷ್ಟು ದಿನ ಮಾಡುತ್ತೀರಾ..? ಮಾನ ಮರ್ಯಾದೆ ಇದ್ದರೆ ಬಾಯಿ ಅಮಿಕೊಂಡು ಇರಬೇಕು. ಸಿದ್ದರಾಮಯ್ಯ ಬಳಿ ಕ್ಷಮೆಗೂ ಆಗ್ರಹಿಸಲ್ಲ. ಏಕೆಂದರೆ ಆತ ಮನುಷ್ಯನೇ ಅಲ್ಲ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದ್ರು.
ಸಿದ್ದರಾಮಯ್ಯ ಕನ್ವರ್ಟ್ ಆಗಿದ್ದಾರೆ. ಸಿದ್ದರಾಮಯ್ಯ ಧರ್ಮಸ್ಥಳಕ್ಕೆ ಹೋಗುವ ಮುನ್ನ ಕೋಳಿ ತಿಂದೆ ಎಂದು ಹೇಳ್ತಾರೆ. ಮಾಂಸ ತಿಂದು ಧರ್ಮಸ್ಥಳಕ್ಕೆ ಹೋದರೆ ಭಕ್ತರು ಹೇಗೆ ಸಹಿಸಿಕೊಳ್ಳಬೇಕು..? ಹಾಗಾದರೆ ಹಂದಿ ತಿಂದು ಮಸೀದಿಗೆ ಹೋಗಲಿ. ಆಗ ನಾನು ಒಪ್ಪುತ್ತೇನೆ. ಇದು ಸಿದ್ದರಾಮಯ್ಯ ಕನ್ವರ್ಟ್ ಆಗಿದ್ದಾರೆ ಅನ್ನೋದಕ್ಕೆ ಉದಾಹರಣೆ. ಇದನ್ನೇ ಕನ್ವರ್ಟ್ ಎಂದು ಕರೆಯುತ್ತಾರೆ ಅಂತಾ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.