ತುಮಕೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಾವಿರಾರು ಕೋಟಿ ರೂಪಾಯಿ ಆಸ್ತಿ ತುಮಕೂರಿನಲ್ಲಿ ಇದೆ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಹೊಸ ಬಾಂಬ್ ಸಿಡಿಸಿದ್ದಾರೆ.
ಡಿ.ಕೆ. ಶಿವಕುಮಾರ್ ರಿಟೇಲ್ ವ್ಯಾಪಾರಿಯಲ್ಲ, ಹೋಲ್ಸೇಲ್ ವ್ಯಾಪಾರಿಯಾಗಿದ್ದಾರೆ. ವಿ.ಎಸ್. ಉಗ್ರಪ್ಪ ಮತ್ತು ಸಲೀಂ ಅವರು ಮಾತನಾಡಿರುವುದು ಸತ್ಯವಾಗಿದೆ. ಕೃಷ್ಣಮೂರ್ತಿ ಎಂಬುವರ ಹೆಸರಿನಲ್ಲಿ ಬೇನಾಮಿ ಆಸ್ತಿ ಇದೆ. ಪಾವಗಡ ಸೋಲಾರ್ ಪಾರ್ಕ್, ಚಿಕ್ಕನಾಯಕನಹಳ್ಳಿ ಗಣಿಗಾರಿಕೆ, ತುಮಕೂರಿನಲ್ಲಿ 100 ಕೋಟಿ ರೂಪಾಯಿ ಮೌಲ್ಯದ ಹೆಂಚಿನ ಫ್ಯಾಕ್ಟರಿ ಇದೆ. ಎಸ್.ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ್ ಬೇನಾಮಿ ಆಸ್ತಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.