alex Certify ಸಾಫ್ಟ್ ವೇರ್ ವೃತ್ತಿ ತೊರೆದು ಭಾರತೀಯ ಸೇನೆ ಸೇರಿದ ಬೆಂಗಳೂರು ಯುವಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾಫ್ಟ್ ವೇರ್ ವೃತ್ತಿ ತೊರೆದು ಭಾರತೀಯ ಸೇನೆ ಸೇರಿದ ಬೆಂಗಳೂರು ಯುವಕ

Software Engineer From Bengaluru Joins Indian Army At 39, Shares Inspiring Journey

ಲಕ್ಷಗಟ್ಟಲೆ ಸಂಬಳದ ಬೆನ್ನತ್ತಿ, ತಮ್ಮ ಬಾಲ್ಯದ ಆಸೆ, ಕನಸು, ನೆಚ್ಚಿನ ಧ್ಯೇಯಗಳನ್ನು ಬದಿಗೊತ್ತಿ ಸಾವಿರಾರು ಯುವಕರು ಸಾಫ್ಟ್ ವೇರ್ ಉದ್ಯಮದಲ್ಲಿ ನಿತ್ಯ ಜೀವನ ಸಾಗಿಸುತ್ತಿದ್ದಾರೆ. ಹೀಗೆ ಇದ್ದಂತಹ ಬೆಂಗಳೂರಿನ 39 ವರ್ಷದ ಸತೀಶ್ ಕುಮಾರ್ ಮಾತ್ರ, ದೃಢಸಂಕಲ್ಪದಿಂದ ಒಂದೇ ಕ್ಷಣದಲ್ಲಿ ತಮ್ಮ ಕನಸನ್ನು ಬೆನ್ನತ್ತಲು ತೀರ್ಮಾನಿಸಿದರು. ಸಾಫ್ಟ್ ವೇರ್ ವೃತ್ತಿಗೆ ರಾಜೀನಾಮೆ ಸಲ್ಲಿಸಿ, ಸೀದಾ ಹೋಗಿ ಸೇರಿದ್ದು ಇಂಡಿಯನ್ ಟೆರ್ರಿಟೋರಿಯಲ್ ಆರ್ಮಿಗೆ.
ಹೌದು, ದೇಶ ಕಾಯೋ ಯೋಧರಾದರು.

ಏಪ್ರಿಲ್‍ನಿಂದ ಅವರು 118 ಇನ್‍ಫ್ಯಾಂಟ್ರಿ ಬೆಟಾಲಿಯನ್‍ನ ಗ್ರೆನೇಡಿಯರ್ಸ್ ರೆಜಿಮೆಂಟ್‍ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ತಮ್ಮ ಸೇನಾ ನೇಮಕಾತಿ ಸಾಹಸದ ಸಂಕ್ಷಿಪ್ತ ಅನುಭವವನ್ನು ಹಂಚಿಕೊಂಡಿರುವ ಅವರು, ಜೋಶ್‍ನಲ್ಲಿ ಸೇನಾ ಸಂದರ್ಶನಕ್ಕೆ ಹೋದಾಗ 30 ವರ್ಷಗಳ ಹಲವು ಯುವಕರು ಅಲ್ಲಿದ್ದದ್ದನ್ನು ಕಂಡು ಬಹಳ ಬೇಸರವಾಯಿತು. ನಾನು ಇನ್ನೂ ಬೇಗನೇ ದೇಶದ ಸೇವೆಗೆ ಬರಬೇಕಾಗಿತ್ತು ಅನಿಸಿತು.

ಪಕ್ಕಾ ಮಾಡೆಲ್‍ನಂತೆ ರ್ಯಾಂಪ್ ವಾಕ್ ಮಾಡಿದ ಪುಟ್ಟ ಹುಡುಗಿ ಈಗ ಸ್ಟಾರ್…..!

ನನ್ನಿಂದ ಇದು ಸಾಧ್ಯವೇ ಎಂದು ಕೂಡ ಅನಿಸಲು ಶುರುವಾಗಿತ್ತು. ಆದರೆ, ಆತ್ಮಸ್ಥೈರ್ಯ ಮತ್ತು ದೃಢಸಂಕಲ್ಪ ನನಗೆ ದಾರಿ ತೋರಿದವು. ಲಿಖಿತ ಪರೀಕ್ಷೆ, ಸಂದರ್ಶನದಲ್ಲಿ ಉತ್ತಮವಾಗಿ ಪ್ರದರ್ಶನ ನೀಡಿದೆ ಎಂದಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...