ಬೆಂಗಳೂರು: ರಂಗಭೂಮಿ ಕಲಾವಿದೆಯೊಬ್ಬರ ಮೇಲೆ ದುಷ್ಕರ್ಮಿಗಳು ಆಸಿಡ್ ದಾಳಿ ನಡೆಸಿರುವ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಬೆಂಗಳೂರಿನ ನಂದಿನಿ ಲೇಔಟ್ ನಲ್ಲಿ ಮಾರ್ಚ್ 18ರಂದು ಮಹಿಳೆ ಮೇಲೆ ಆಸಿಡ್ ದಾಳಿ ನಡೆಸಲಾಗಿದೆ. ನಂದಿನಿ ಲೇಔಟ್ ನ ಮನೆಯ ಜಗುಲಿ ಮೇಲೆ ಮಲಗಿದ್ದ ರಂಗಭೂಮಿ ಕಲಾವಿದೆ ದೇವಿ ಎಂಬುವವರ ಮೇಲೆ ಆಸಿಡ್ ದಾಳಿ ನಡೆಸಲಾಗಿದೆ.
ರಂಗಭೂಮಿ ಸಹಪಾಠಿಗಳೇ ಈ ದುಷ್ಕೃತ್ಯವೆಸಗಿದ್ದಾರೆ. ರಮೇಶ್, ಸ್ವಾತಿ, ಯೋಗೇಶ್ ಎಂಬ ಮೂವರು ಆಸಿಡ್ ದಾಳಿ ನಡೆಸಿದ್ದು, ನಂದಿನಿ ಲೇಔಟ್ ಠಾಣೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಈ ಹಿಂದೆ ಬಿಎಂಟಿಸಿಯಲ್ಲಿ ನಿರ್ವಾಹಕಳಾಗಿ ದೇವಿ ಕಾರ್ಯನಿರ್ವಹಿಸುತ್ತಿದ್ದರು. ಆದರೆ ಅನಾರೋಗ್ಯ ಕಾರಣಕ್ಕೆ ನಿರ್ವಾಹಕ ಹುದ್ದೆ ತೊರೆದಿದ್ದ ದೇವಿ, ರಂಗಭೂಮಿ ಕಲಾವಿದೆಯಾಗಿ ಅಭಿನಯಿಸುತ್ತಿದ್ದರು.