alex Certify ಸುವರ್ಣ ಮಹೋತ್ಸವ ಪ್ರಶಸ್ತಿ ಸ್ವೀಕರಿಸಲು ಬೆಂಗಳೂರಿಗೆ ಕರೆಸಿ ಪ್ರಶಸ್ತಿ ನೀಡದೆ ಸಮಾಜ ಸೇವಕಗೆ ಅವಮಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸುವರ್ಣ ಮಹೋತ್ಸವ ಪ್ರಶಸ್ತಿ ಸ್ವೀಕರಿಸಲು ಬೆಂಗಳೂರಿಗೆ ಕರೆಸಿ ಪ್ರಶಸ್ತಿ ನೀಡದೆ ಸಮಾಜ ಸೇವಕಗೆ ಅವಮಾನ

ಬೆಂಗಳೂರು: ಸುವರ್ಣ ಮಹೋತ್ಸವ ಪ್ರಶಸ್ತಿ ಪ್ರದಾನ ಮಾಡುವ ವಿಚಾರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಎಡವಟ್ಟು ಮಾಡಿಕೊಂಡಿದೆ.

ಮಂಗಳೂರಿನ ಸಮಾಜಸೇವಕರೊಬ್ಬರನ್ನು ಬೆಂಗಳೂರಿಗೆ ಕರೆಸಿ ಅವಮಾನ ಮಾಡಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳು ಎಡವಟ್ಟು ಮಾಡಿದ್ದಾರೆ. ಮಂಗಳೂರಿನ ಸಮಾಜಸೇವಕ ಬಾಬು ಪಿಲಾರ ಅವರಿಗೆ ಅವಮಾನ ಮಾಡಲಾಗಿದೆ.

ಬೆಂಗಳೂರಿಗೆ ಕರೆಸಿ ಕೆಕೆ ಗೆಸ್ಟ್ ಹೌಸ್ ನಲ್ಲಿ ಕೊಠಡಿ ಕೂಡ ನೀಡಿದ್ದರು. ಸಂಜೆ ಪ್ರಶಸ್ತಿ ವಿತರಣೆಯ ವೇಳೆ ನಿಮ್ಮ ಹೆಸರು ತಪ್ಪಾಗಿ ಬಂದಿದೆ ಎಂದು ಹೇಳಿದ್ದಾರೆ. ಬಾಬು ಪಿಲಾರ ಬದಲು ಬಾಬು ಕಿಲಾರ ಆಗಬೇಕಿತ್ತು ಎಂದು ಸಮಜಾಯಿಷಿ ನೀಡಿದ್ದಾರೆ. ಕೊನೆಯ ಕ್ಷಣದಲ್ಲಿ ಪ್ರಶಸ್ತಿ ನೀಡದೆ ಅಪಮಾನ ಮಾಡಿದ್ದಾರೆ. ಕಣ್ತಪ್ಪಿನಿಂದ ತಪ್ಪಾಗಿದೆ ಕ್ಷಮಿಸಿ ಎಂದು ಅಧಿಕಾರಿಗಳು ಪ್ರಶಸ್ತಿ ನೀಡಿಲ್ಲ.

ನಿನ್ನೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿ ನೀಲಮ್ಮ ಕರೆ ಮಾಡಿದ್ದಾರೆ. ಕೊಠಡಿ ಕೂಡ ಕೊಟ್ಟು ಇಂದು ಸಂಜೆ ಪ್ರಶಸ್ತಿ ಸ್ವೀಕರಿಸಲು ಮಾಹಿತಿ ನೀಡಿದ್ದಾರೆ. ಆದರೆ, ಸಂಜೆ ಕುಮಾರ ಕೃಪ ಬಳಿ ಬಸ್ ಹತ್ತುವಾಗ ಫೋನ್ ಮಾಡಿ ನಿಮಗಲ್ಲ ಬಾಬು ಕಿಲಾರ ಅವರಿಗೆ ಪ್ರಶಸ್ತಿ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೂ ಬಾಬು ಪಿಲಾರ ಆಯ್ಕೆಯಾಗಿದ್ದರು. ಅಧಿಕಾರಿ ನೀಲಮ್ಮ ಕರೆ ಮಾಡಿದ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಬಾಬು ಪಿಲಾರ ಆಗಮಿಸಿದ್ದರು. ಸುವರ್ಣ ಮಹೋತ್ಸವ ಪ್ರಶಸ್ತಿ ಪಟ್ಟಿಯ ಸಂಕೀರ್ಣ ವಿಭಾಗದಲ್ಲಿ ಸಮಾಜ ಸೇವಕ ಬಾಬು ಕಿಲಾರ ಹೆಸರು ಘೋಷಣೆಯಾಗಿತ್ತು. ಬಾಬು ಕಿಲಾರ ಬದಲು ಬಾಬು ಪಿಲಾರ ಅವರಿಗೆ ಫೋನ್ ಮಾಡಿ ಕರೆಸಿಕೊಂಡಿದ್ದಾರೆ. ಅತ್ತ ಜಿಲ್ಲಾ ಪ್ರಶಸ್ತಿಯೂ ಇಲ್ಲದೆ ಇತ್ತ ರಾಜ್ಯ ಪ್ರಶಸ್ತಿಯೂ ಇಲ್ಲದೆ ಅಪಮಾನ ಮಾಡಲಾಗಿದೆ. ಸ್ಪೀಕರ್ ಖಾದರ್ ಪ್ರತಿನಿಧಿಸುವ ಉಳ್ಳಾಲ ಕ್ಷೇತ್ರದ ಸಮಾಜ ಸೇವಕ ಪಿಲಾರ ಅವರು ಅಲ್ಪಸಂಖ್ಯಾತರ ಪಾರ್ಥಿವ ಶರೀರಗಳಿಗೆ ಅಂತ್ಯಕ್ರಿಯೆ ನೆರವೇರಿಸುತ್ತಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...