ಗ್ರಾಹರನ್ನು ಸೆಳೆಯಲು ಆಕರ್ಷಕ ಜಾಹೀರಾತಿಗೆ ಎಲ್ಲ ಕಂಪನಿಗಳು ಮಹತ್ವ ನೀಡುತ್ತವೆ. ಆದ್ರೆ ಕೆಲವೊಂದು ಜಾಹೀರಾತು ಗ್ರಾಹಕರ ಗಮನ ಸೆಳೆದ್ರೆ ಮತ್ತೆ ಕೆಲ ಜಾಹೀರಾತುಗಳು ವಿಚಿತ್ರವಾಗಿರುತ್ತವೆ. ಥೈಲ್ಯಾಂಡ್ ನ ಕ್ಷೌರದಂಗಡಿ ಜಾಹೀರಾತು ಅನೇಕರ ಕೋಪಕ್ಕೆ ಕಾರಣವಾಗಿದೆ.
ಈ ಜಾಹೀರಾತನ್ನು ನೋಡಿದ ಜನರು ಇದನ್ನು ಥಾಯ್ ವೇಶ್ಯಾಗೃಹವೆಂದು ಹೇಳ್ತಿದ್ದಾರೆ. ಥೈಲ್ಯಾಂಡ್‌ನ ನಖೋನ್ ಸಾವನ್ ಸಿಟಿಯಲ್ಲಿರುವ, ರಿಯಲ್ ಕರ್ 4 ಥಾಯ್ ಬಾರ್ಬರ್ ಶಾಪ್ ಹೆಸರಿನ ಕ್ಷೌರದ ಅಂಗಡಿ ತನ್ನ ಜಾಹೀರಾತನ್ನು ಸಾಮಾಜಿಕ ಜಾಲತಾಣ ಫೇಸ್ಬುಕ್ ನಲ್ಲಿ ಹಂಚಿಕೊಂಡಿದೆ. ನಾಲ್ಕು ಫೋಟೋಗಳನ್ನು ಹಂಚಿಕೊಳ್ಳಲಾಗಿದೆ. ಪುರುಷ ಗ್ರಾಹಕ ಕುರ್ಚಿ ಮೇಲೆ ಕುಳಿತಿದ್ದು, ಆತನ ಮೈ ಮೇಲೆ ಚಿಕ್ಕ ಬಟ್ಟೆ ಧರಿಸಿದ ಮಹಿಳಾ ಸಿಬ್ಬಂದಿಯಿದ್ದಾಳೆ. ಕುರ್ಚಿ ಮೇಲೆ ಕುಳಿತ ಪುರುಷ ಸಂತೋಷವಾಗಿದ್ದಂತೆ ಫೋಟೋ ಕ್ಲಿಕ್ಕಿಸಲಾಗಿದೆ.
ಈ ಅಂಗಡಿಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಆರಂಭವಾಗಿದೆ. ಅನೇಕ ಬಳಕೆದಾರರು ಇದನ್ನು ಥಾಯ್ ವೇಶ್ಯಾಗೃಹ ಎಂದಿದ್ದಾರೆ. ಕ್ಷೌರದ ಅಂಗಡಿಯಲ್ಲಿ ಕ್ಷೌರ ಮಾಡ್ತಾರಾ ಇಲ್ಲ ಮಸಾಜ್ ಮಾಡ್ತಾರಾ ಎಂದು ಕೇಳುತ್ತಿದ್ದಾರೆ.
ಇದಕ್ಕೆ ಅಂಗಡಿ ಸ್ಪಷ್ಟೀಕರಣ ಕೂಡ ನೀಡಿದೆ. ಜಾಹೀರಾತನ್ನು ತಪ್ಪು ತಿಳಿಯಲಾಗಿದೆ. ಜಾಹೀರಾತಿನ ನಂತ್ರ ಅನೇಕ ಕರೆಗಳು ಬರ್ತಿವೆ. ಈ ಫೋಟೋದಲ್ಲಿರುವವರು ಇಬ್ಬರು ಸಿಬ್ಬಂದಿ ಎಂದು ಸ್ಪಷ್ಟೀಕರಣ ನೀಡಿದ್ದಾರೆ.