ದಾವಣಗೆರೆ: ಸಾಮಾಜಿಕ ಭದ್ರತೆಯ ಸಂಧ್ಯಾ ಸುರಕ್ಷಾ ಯೋಜನೆಯ ನಕಲಿ ಮಂಜೂರಾತಿ ಪತ್ರ ವಿತರಿಸಿದ ಆರೋಪದ ಮೇಲೆ ಸೇವಾ ಸಿಂಧು ಆಪರೇಟರ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಮಾಯಕೊಂಡ ಸಮೀಪದ ಕಂದಗಲ್ಲು ಗ್ರಾಮದ ಸೇವಾ ಸಿಂಧು ಕೇಂದ್ರದ ನವೀನ್ ಪಿ.ಜಿ. ನಕಲಿ ಮಂಜೂರಾತಿ ಪತ್ರಗಳನ್ನು ನೀಡಿದ್ದಾರೆ. ಈ ಬಗ್ಗೆ ಬಂದ ದೂರು ಆಧರಿಸಿ ಪತ್ರಗಳನ್ನು ಪರಿಶೀಲಿಸಿದಾಗ ಆದೇಶ ಪ್ರತಿಗಳಿಗೆ ಇಲಾಖೆಯ ಯಾವುದೇ ಡಿಜಿಟಲ್ ಸಹಿ ಇಲ್ಲದಿರುವುದು ಕಂಡುಬಂದಿದೆ.
ಈ ಕುರಿತಾಗಿ ಗ್ರಾಮ ಆಡಳಿತ ಅಧಿಕಾರಿ, ರಾಜಸ್ವ ನಿರೀಕ್ಷಕ, ಫಲಾನುಭವಿಗಳ ಹೇಳಿಕೆ ಆಧರಿಸಿ ಹದಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ಮಾಯಕೊಂಡ ನಾಡಕಚೇರಿ ಉಪ ತಹಶೀಲ್ದಾರ್ ಹೆಚ್.ಬಿ. ಹಾಲೇಶ್ ಮಾಹಿತಿ ನೀಡಿದ್ದಾರೆ.