ವಿಜಯವಾಡ: ಆಂಧ್ರಪ್ರದೇಶ ಸರ್ಕಾರ ಶನಿವಾರ ಹೊಸ ವರ್ಷದ ಉಡುಗೊರೆಯಾಗಿ ಸಾಮಾಜಿಕ ಭದ್ರತಾ ಪಿಂಚಣಿ ಹೆಚ್ಚಿಸಿದೆ. ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರು ಗುಂಟೂರು ಜಿಲ್ಲೆಯ ಪ್ರತಿಪಾದುವಿನಲ್ಲಿ ಹೆಚ್ಚಿಸಿದ ಪಿಂಚಣಿ ವಿತರಣಾ ಕಾರ್ಯಕ್ರಮ ಉದ್ಘಾಟಿಸುವುದರೊಂದಿಗೆ ಫಲಾನುಭವಿಗಳೊಂದಿಗೆ ಹೊಸ ವರ್ಷವನ್ನು ಆಚರಿಸಿದ್ದಾರೆ.
ಚುನಾವಣಾ ಭರವಸೆಯನ್ನು ಈಡೇರಿಸಿ ವೈಎಸ್‌ಆರ್‌ಸಿ ಅಧಿಕಾರಕ್ಕೆ ಬಂದ ನಂತರ ತಮ್ಮ ಸರ್ಕಾರ ಸಾಮಾಜಿಕ ಭದ್ರತಾ ಪಿಂಚಣಿಯನ್ನು 2,250 ರೂ.ಗೆ ಹೆಚ್ಚಿಸಿದೆ. ಹೊಸ ವರ್ಷದ ಕೊಡುಗೆಯಾಗಿ ಪಿಂಚಣಿ ಹೆಚ್ಚಳ ಮಾಡಲಾಗಿದೆ ಎಂದು ಸಿಎಂ ಹೇಳಿದ್ದಾರೆ.
ವೈಎಸ್‌ಆರ್ ಪಿಂಚಣಿ ಕಣುಕಾ ಅಡಿಯಲ್ಲಿ ಪ್ರತಿ ಫಲಾನುಭವಿಗೆ 2,500 ರೂ. ರಂತೆ ವರ್ಧಿತ ಪಿಂಚಣಿ ವಿತರಣೆಗಾಗಿ ಅವರು ಜನವರಿಗೆ 1,570 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ.