
ಇಂತಹ ವಿಡಿಯೋನ ‘ಸಾಮಾಜಿಕ ಪುರಾವೆ’ ಎಂದು ಕರೆಯಲಾಗುತ್ತದೆ. ಏಕೆಂದರೆ ಜನರು ನಿರ್ದಿಷ್ಟ ಸನ್ನಿವೇಶದಲ್ಲಿ ಹೇಗೆ ವರ್ತಿಸಬೇಕು ಎಂಬುದನ್ನು ಆಯ್ಕೆ ಮಾಡುವಲ್ಲಿ ಇತರರ ಕ್ರಿಯೆಗಳನ್ನು ನಕಲು ಮಾಡುತ್ತಾರೆ. ಟ್ವಿಟರ್ ಬಳಕೆದಾರರು ಈಜಿಪ್ಟ್ ನ ಪ್ರವಾಸಿ ತಾಣದ ವೀಡಿಯೊವನ್ನು ಹಂಚಿಕೊಂಡಿದ್ದಾರೆ.
ಲಕ್ಸಾರ್‌ನ ಕಾರ್ನಾಕ್ ದೇವಸ್ಥಾನದಲ್ಲಿ ಮಹಿಳೆಯೊಬ್ಬರು ಸ್ಕಾರಬ್‌ನ ಪ್ರತಿಮೆಯನ್ನು ಸುತ್ತುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ಮಹಿಳೆ ಪ್ರತಿಮೆಯ ಸುತ್ತಲು ಪ್ರಾರಂಭಿಸಿದಾಗ, ಬೇರೆ ಯಾರೂ ಇರುವುದಿಲ್ಲ. ಆದರೆ ಕೆಲ ಸಮಯದ ನಂತರ ಪ್ರವಾಸಿಗರು ಅದನ್ನು ಸುತ್ತುವರಿಯಲು ಪ್ರಾರಂಭಿಸುತ್ತಾರೆ. ತದನಂತರ ಜನಸಂದಣಿಯು ಹೆಚ್ಚಾಗುತ್ತದೆ.
ಟ್ವಿಟರ್ ಬಳಕೆದಾರ ಗೌತಮ್ ಜೇ ಅವರು ವಿಡಿಯೋವನ್ನ ಪೋಸ್ಟ್ ಮಾಡಿದ್ದಾರೆ. ಆದಾಗ್ಯೂ ಹಲವು ನೆಟ್ಟಿಗರು ಈ ಪ್ರತಿಮೆಯ ಸುತ್ತಲೂ ನಡೆದರೆ, ಅವರ ಆಸೆ ಈಡೇರುತ್ತದೆ ಎಂಬ ನಂಬಿಕೆ ಇದೆ ಎಂದು ಹೇಳಿದ್ದಾರೆ.
“ಇದು ಈಜಿಪ್ಟ್‌ನ ಲಕ್ಸಾರ್‌ನ ಕಾರ್ನಾಕ್ ದೇವಸ್ಥಾನದಲ್ಲಿದೆ. ನೀವು ಮೌನವಾಗಿ ಏಳು ಬಾರಿ ಪ್ರದಕ್ಷಿಣೆ ಹಾಕಿದರೆ, ನೀವು ಹೆಚ್ಚು ಬಯಸುವ ವಿಷಯದ ಬಗ್ಗೆ ಯೋಚಿಸುವಾಗ, ದೇವರು ನಿಮ್ಮ ಆಸೆಯನ್ನು ಪೂರೈಸುತ್ತಾನೆ ಎಂಬ ನಂಬಿಕೆ ಇದೆ. ಪ್ರವಾಸಿ ಮಾರ್ಗದರ್ಶಿ ಕಥೆಯನ್ನು ಹೇಳಿದ ನಂತರ ನಮ್ಮಲ್ಲಿ ಹಲವರು ಇದನ್ನು ಮಾಡಿದ್ದೇವೆ”ಎಂದು ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.