ಅತಿಯಾದ ವೇಗ ಅಪಾಯಕ್ಕೆ ಕಾರಣ ಅನ್ನೋದು ಗೊತ್ತಿದ್ದರೂ, ವಾಹನ ಸವಾರರು ಅದನ್ನ ನಿರ್ಲಕ್ಷ್ಯ ಮಾಡುವುದೇ ಹೆಚ್ಚು. ಇದೇ ಕಾರಣಕ್ಕೆನೇ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚಾಗ್ತಾ ಇರೋದು. ಈಗ ಇದೇ ರಸ್ತೆ ಅಪಘಾತಕ್ಕೆ ಸೋಶಿಯಲ್ ಮಿಡಿಯಾದಲ್ಲಿ ಇನ್ಫ್ಲೂಯನ್ಸರ್ ಆಗಿದ್ದ 25 ವರ್ಷದ ರೋಹಿತ್ ಭಾಟಿ ಸಾವನ್ನಪ್ಪಿದ್ದಾರೆ.
ಗ್ರೇಟರ್ ನೋಯ್ದಾ ಹೈವೇ ರಸ್ತೆಯಲ್ಲಿ ವೇಗವಾಗಿ ಕಾರು ಚಲಾಯಿಸಿಕೊಂಡು ಬರ್ತಿದ್ದ ರೋಹಿತ್ ಭಾಟಿ, ಅಲ್ಲೇ ಇದ್ದ ಮರವೊಂದಕ್ಕೆ ಗುದ್ದಿದ್ದಾರೆ. ಈ ಕಾರು ಅಪಘಾತದಲ್ಲಿ ರೋಹಿತ್ ಭಾಟಿ ಸಾವು ಸ್ಥಳದಲ್ಲೇ ಆಗಿದ್ದು, ಕಾರ್ ಒಳಗಿದ್ದ ಮನೋಜ್ ಮತ್ತು ಅತಿಷ್ ಇವರಿಬ್ಬರಿಗೆ ಗಂಭೀರ ರೂಪದ ಗಾಯಗಳಾಗಿವೆ.
ಬುಲಂದ್ ಶಹರ್ನ ನಿವಾಸಿಯಾಗಿದ್ದ ರೋಹಿತ್, ಸೋಶಿಯಲ್ ಮಿಡಿಯಾದಲ್ಲಿ ‘ರೌಡಿ’ ಅನ್ನೋ ಹೆಸರಿನಿಂದ ಫೇಮಸ್ ಆಗಿದ್ದವರು. ಫೇಸ್ಬುಕ್, ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋಗಳನ್ನ ಪೋಸ್ಟ್ ಮಾಡಿ ಭಾರೀ ಜನಪ್ರಿಯರಾಗಿದ್ದವರು. ಇವರಿಗೆ ಇನ್ಸ್ಟಾಗ್ರಾಮ್ನಲ್ಲಿ ಏನಿಲ್ಲ ಅಂದರೂ 9 ಲಕ್ಷಕ್ಕೂ ಹೆಚ್ಚು ಜನ ಫಾಲೋವಸ್೯ ಗಳಿದ್ದಾರೆ.
ರೋಹಿತ್ ಮತ್ತು ಅವರ ಗೆಳೆಯರು ಪಾರ್ಟಿ ಮುಗಿಸಿಕೊಂಡು ಮನೆಗೆ ಹಿಂದಿರುಗುವಾಗ, ಈ ಘಟನೆ ಚುಹಡ್ಪುರ್ ಬಳಿ ಇರುವ ಅಂಡರ್ಪಾಸ್ ಬಳಿ ಮಧ್ಯರಾತ್ರಿ 3 ಗಂಟೆಯ ಹೊತ್ತಿಗೆ ಸಂಭವಿಸಿದೆ. ಎಂದು ಸ್ಥಳೀಯ ಪೊಲೀಸರು ಮಾಹಿತಿ ಕೊಟ್ಟಿದ್ದಾರೆ. ಅತಿಯಾದ ವೇಗವೇ ಈ ದುರ್ಘಟನೆಗೆ ಕಾರಣ ಎಂದು ಅವರು ಹೇಳಿದ್ದಾರೆ.