ನವದೆಹಲಿ: ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ ಜುಲೈ 1 ರಿಂದ ಅನ್ವಯವಾಗುವಂತೆ ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎನ್ನಲಾದ ಪತ್ರವೊಂದು ವೈರಲ್ ಆಗಿದೆ.
ಕೊರೋನಾ ಕಾರಣ ಆರ್ಥಿಕ ಬಿಕ್ಕಟ್ಟಿನಿಂದ ತಡೆಹಿಡಿಯಲಾಗಿದ್ದ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ತುಟ್ಟಿಭತ್ಯೆ ಹಾಗೂ ತುಟ್ಟಿಭತ್ಯೆ ಪರಿಹಾರವನ್ನು ಜುಲೈ 1 ರಿಂದ ಅನ್ವಯವಾಗುವಂತೆ ಬಿಡುಗಡೆ ಮಾಡಲಾಗುವುದು.
2020ರ ಜುಲೈ 1 ರಿಂದ ಮತ್ತು 2021 ರ ಜನವರಿ 1 ರಿಂದ ಬಾಕಿ ಉಳಿದ ಪರಿಹಾರವನ್ನು ಮೂರು ಕಂತುಗಳಲ್ಲಿ ಬಿಡುಗಡೆ ಮಾಡಲಾಗುವುದು. ಕೇಂದ್ರದ ಹಣಕಾಸು ಕಾರ್ಯದರ್ಶಿ ಟಿ.ವಿ. ಸೋಮನಾಥನ್ ಈ ಕುರಿತು ಆದೇಶ ಹೊರಡಿಸಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಆದೇಶದ ಪ್ರತಿಯೊಂದು ಹರಿದಾಡುತ್ತಿದೆ.
ಆದರೆ, ಆ ಆದೇಶದ ಪ್ರತಿಯಾಗಿ ನಕಲಿಯಾಗಿದೆ. ಅಂತಹ ಯಾವುದೇ ಘೋಷಣೆಯನ್ನು ಭಾರತ ಸರ್ಕಾರ ಮಾಡಿಲ್ಲವೆಂದು ಸ್ಪಷ್ಟಪಡಿಸಲಾಗಿದೆ.