ಫೇಸ್ಬುಕ್, ಇನ್ಸ್ಟ್ರಾಗ್ರಾಮ್, ಯುಟ್ಯೂಬ್ ನಂತಹ ಸಾಮಾಜಿಕ ಜಾಲತಾಣಗಳು ಪ್ರಸಿದ್ಧ ವ್ಯಕ್ತಿಗಳು, ಪ್ರಭಾವಿ ವ್ಯಕ್ತಿಗಳು ಮತ್ತು ಸಾಮಾನ್ಯ ಜನರ ನಕಲಿ ಪ್ರೊಫೈಲ್‌ಗಳನ್ನು ನಿಷೇಧಿಸಬಹುದಾಗಿದೆ. ಹೊಸ ಐಟಿ ನಿಯಮಗಳ ಅಡಿಯಲ್ಲಿ ದೂರು ನೀಡಿದ 24 ಗಂಟೆಗಳ ಒಳಗೆ ಸಾಮಾಜಿಕ ಮಾಧ್ಯಮ ಕಂಪನಿಗಳು ನಕಲಿ ಪ್ರೊಫೈಲ್‌ಗಳನ್ನು ಸ್ಥಗಿತಗೊಳಿಸಬೇಕೆಂದು ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಇದು ಹೊಸ ಐಟಿ ನಿಯಮಗಳ ಭಾಗವಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಉದಾಹರಣೆಗೆ, ಅನುಯಾಯಿಗಳನ್ನು ಹೆಚ್ಚಿಸಲು ಅಥವಾ ಸಂದೇಶಗಳನ್ನು ಅನೇಕ ಜನರಿಗೆ ತಲುಪಿಸುವ ಉದ್ದೇಶದಿಂದ ಪ್ರಸಿದ್ಧ ಚಲನಚಿತ್ರ ನಟ, ಕ್ರಿಕೆಟಿಗ ಅಥವಾ ರಾಜಕಾರಣಿ ಅಥವಾ ಇನ್ನಾವುದೇ ಬಳಕೆದಾರರ ಫೋಟೋವನ್ನು ಬಳಸಿಕೊಂಡಿದ್ದರೆ, ಫೋಟೋದಲ್ಲಿರುವ ವ್ಯಕ್ತಿ ಈ ಬಗ್ಗೆ ಅಸಮಾಧಾನಗೊಂಡಿದ್ದರೆ ಆತ ದೂರು ನೀಡಬಹುದು. ಹೊಸ ಐಟಿ ನಿಯಮಗಳಲ್ಲಿ ಈ ನಿಬಂಧನೆಗಳನ್ನು ಸೇರಿಸಲಾಗಿದೆ. ಈ ಬಗ್ಗೆ ದೂರು ಬರ್ತಿದ್ದಂತೆ ಸಾಮಾಜಿಕ ಜಾಲತಾಣ ಕಂಪನಿಗಳು ನಕಲಿ ಪ್ರೊಫೈಲನ್ನು ರದ್ದು ಮಾಡಬೇಕು.
ಪ್ರಸಿದ್ಧ ವ್ಯಕ್ತಿಗಳ ಹೆಸರಿನಲ್ಲಿ ಅನೇಕ ನಕಲಿ ಪ್ರೊಫೈಲ್ ಸಿದ್ಧವಾಗುತ್ತದೆ. ಅದ್ರ ಮೂಲಕ ಅನೇಕ ಅಪರಾಧ ಪ್ರಕರಣಗಳು ನಡೆಯುತ್ತಿವೆ. ಇದು ಪ್ರಸಿದ್ಧ ವ್ಯಕ್ತಿಗಳಿಗೆ ಸಮಸ್ಯೆ ತಂದೊಡ್ಡುತ್ತಿದೆ. ಕೆಲವು ಅಭಿಮಾನಿಗಳು, ಅಭಿಮಾನಕ್ಕಾಗಿ ಸೆಲೆಬ್ರಿಟಿಗಳ ಫೋಟೋ ಬಳಸುತ್ತಿದ್ದಾರೆ. ಇದೆಲ್ಲವಕ್ಕೂ ಇನ್ಮುಂದೆ ಬ್ರೇಕ್ ಬೀಳುವ ಸಾಧ್ಯತೆಯಿದೆ.