
ತುಮಕೂರು: ಇ- ಕಾಮರ್ಸ್ ದೈತ್ಯ ಅಮೆಜಾನ್ ಕಂಪನಿಯ ಮೂಲಕ 32 ಸಾವಿರ ರೂಪಾಯಿ ಬೆಲೆಬಾಳುವ ಮೊಬೈಲ್ ಬುಕ್ ಮಾಡಿದ್ದ ಗ್ರಾಹಕರೊಬ್ಬರಿಗೆ 20 ರೂ. ಬೆಲೆಯ ಪಾತ್ರೆ ತೊಳೆಯುವ ಸೋಪುಗಳು ಬಂದಿವೆ.
ತುಮಕೂರು ಜಿಲ್ಲೆ ತುರುವೇಕೆರೆಯ ಸರಸ್ವತಿಪುರಂ ನಿವಾಸಿ ಜಯಶೀಲ ಎಂಬ ಗ್ರಾಹಕರು ಅಮೆಜಾನ್ ನಲ್ಲಿ ಮೂರು ದಿನಗಳ ಹಿಂದೆ 32 ಸಾವಿರ ರೂಪಾಯಿ ಬೆಲೆಯ ಮೊಬೈಲ್ ಬುಕ್ ಮಾಡಿದ್ದಾರೆ. ಬುಧವಾರ ಮಧ್ಯಾಹ್ನ ಕೋರಿಯರ್ ಬಾಯ್ ತಂದ ಪಾರ್ಸೆಲ್ ನೀಡುವ ಮೊದಲು ಅನುಮಾನದಿಂದ ಓಪನ್ ಮಾಡಲು ಹೇಳಿದ್ದಾರೆ.
ಆಗ ಅದರಲ್ಲಿ 20 ರೂಪಾಯಿಯ 4 ಸೋಪು ಮತ್ತು ಒಂದು ಪಾತ್ರೆ ತೊಳೆಯುವ ಬ್ರಷ್ ನೋಡಿ ಶಾಕ್ ಆಗಿದ್ದಾರೆ. ಬಳಿಕ ಅವರು ಪಾರ್ಸೆಲ್ ಅನ್ನು ಕೊರಿಯರ್ ಬಾಯ್ ಗೆ ಹಿಂತಿರುಗಿಸಿ ದಾಖಲೆಗಳ ಸಮೇತ ಜಿಲ್ಲಾ ಗ್ರಾಹಕರ ವೇದಿಕೆಗೆ ದೂರು ನೀಡಿದ್ದಾರೆ.