ಕೇಂದ್ರದ ಮಾಜಿ ಕಾನೂನು ಸಚಿವ ಹಾಗೂ ಹಿರಿಯ ವಕೀಲ ಕಪಿಲ್ ಸಿಬಲ್ ಸುಪ್ರೀಂ ಕೋರ್ಟ್ ನಲ್ಲಿ 50 ವರ್ಷಗಳ ಕಾಲ ವಕೀಲಿ ವೃತ್ತಿಯನ್ನು ಪೂರ್ಣಗೊಳಿಸಿದ್ದು, ಈ ಸಂದರ್ಭದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿ ಪರ – ವಿರೋಧದ ಚರ್ಚೆಗೆ ಕಾರಣರಾಗಿದ್ದಾರೆ.
ಶನಿವಾರದಂದು ನವದೆಹಲಿಯಲ್ಲಿ ಆಯೋಜಿಸಲಾಗಿದ್ದ ಪೀಪಲ್ಸ್ ಟ್ರಿಬ್ಯೂಲ್ ನಲ್ಲಿ ಮಾತನಾಡಿದ ವೇಳೆ ಕಪಿಲ್ ಸಿಬಲ್, ನ್ಯಾಯಾಲಯದಿಂದ ಪರಿಹಾರ ಸಿಗುತ್ತದೆ ಎಂದು ಯಾರಾದರೂ ಭಾವಿಸಿದರೆ ಅದು ತಪ್ಪು ಕಲ್ಪನೆ. ನನ್ನ ವೃತ್ತಿ ಜೀವನದ ಅನುಭವದಲ್ಲಿ ಸುಪ್ರೀಂ ಕೋರ್ಟ್ ಬಗ್ಗೆ ನಂಬಿಕೆಯನ್ನೇ ಕಳೆದುಕೊಂಡಿದ್ದೇನೆ ಎಂದಿದ್ದಾರೆ.
ಅವರ ಈ ಹೇಳಿಕೆಯನ್ನು ಅಖಿಲ ಭಾರತ ವಕೀಲರ ಸಂಘ ಖಂಡಿಸಿದ್ದು, ಕಪಿಲ್ ಸಿಬಲ್ ಮತ್ತು ಅವರ ಸಂಗಡಿಗರು ಕೆಲವೊಂದು ಪ್ರಕರಣಗಳಲ್ಲಿ ಮಂಡಿಸಿದ್ದ ವಾದ ಒಪ್ಪಿಲ್ಲ ಎಂಬ ಕಾರಣಕ್ಕೆ ಇಂತಹ ಹೇಳಿಕೆ ನೀಡುವುದು ಸರಿಯಲ್ಲ ಎಂದು ತಿಳಿಸಿದೆ. ಮತ್ತೊಂದಿಷ್ಟು ಜನ ಕಪಿಲ್ ಸಿಬಲ್ ಮಾತನ್ನು ಬೆಂಬಲಿಸಿದ್ದಾರೆ.