ಸಾಧಿಸಬೇಕೆಂಬ ಛಲವೊಂದಿದ್ದರೆ ಸಾಕು ಯಾವುದೇ ಅಡೆತಡೆಗಳು ಲೆಕ್ಕಕ್ಕೆ ಬರೋದಿಲ್ಲ. ಈ ಮಾತಿಗೆ ಪ್ರತ್ಯಕ್ಷ ಸಾಕ್ಷಿ ಎಂಬಂತೆ 23 ವರ್ಷದ ಜಿಯೋನ್ ಕ್ಲಾರ್ಕ್ ಎಂಬವರು ಸಾಧನೆ ಮಾಡಿ ತೋರಿಸಿದ್ದಾರೆ.
20 ಮೀಟರ್ಗಳಷ್ಟು ದೂರ ತಮ್ಮ ಕೈನಿಂದ ಅತ್ಯಂತ ವೇಗವಾಗಿ ಚಲಿಸುವ ಮೂಲಕ ಜಿಯೋನ್ ವಿಶ್ವ ದಾಖಲೆ ನಿರ್ಮಿಸಿದ್ದಾರೆ. 20 ಮೀಟರ್ ದೂರವನ್ನು ಜಿಯೋನ್ ಕೇವಲ 4.76 ಸೆಕೆಂಡ್ಗಳಲ್ಲಿ ಕ್ರಮಿಸಿದ್ದಾರೆ.
ಜಿಯೋನ್ ಕ್ಲಾರ್ಕ್ ಸಾಧನೆ ಇಷ್ಟೊಂದು ವಿಶೇಷ ಎನಿಸಲು ವಿಶೇಷ ಕಾರಣವೊಂದಿದೆ. ಕ್ಲಾರ್ಕ್ಗೆ ಎರಡೂ ಕಾಲುಗಳಿಲ್ಲ. ಓಹಿಯೋದ ನಿವಾಸಿಯಾದ ಕ್ಲಾರ್ಕ್ ಹುಟ್ಟುತ್ತಲೇ ಕಾಲುಗಳನ್ನು ಹೊಂದಿರಲಿಲ್ಲ. ಕಾಡಲ್ ರಿಗ್ರೆಷನ್ ಸಿಂಡ್ರೋಮ್ನಿಂದ ಬಳಲುತ್ತಿರುವ ಕ್ಲಾರ್ಕ್ ಹುಟ್ಟುವಾಗಲೇ ತಮ್ಮ ಅರ್ಧ ದೇಹವನ್ನೇ ಹೊಂದಿರಲಿಲ್ಲ.
ಆದರೆ ಈ ನ್ಯೂನ್ಯತೆಯು ಕ್ಲಾರ್ಕ್ರ ಸಾಧನೆಯ ಹಾದಿಗೆ ಅಡ್ಡಿ ಎನಿಸಲಿಲ್ಲ. ಶಾಲಾ ದಿನಗಳಲ್ಲಿ ಕುಸ್ತಿಪಟು ಕೂಡ ಆಗಿದ್ದ ಕ್ಲಾರ್ಕ್ ಯಾವಾಗಲೂ ಕ್ರೀಡಾ ಲೋಕದಲ್ಲಿ ಆಸಕ್ತಿ ಹೊಂದಿದ್ದವರಾಗಿದ್ದರು.
ಈ ವರ್ಷದ ಫೆಬ್ರವರಿ ತಿಂಗಳಲ್ಲಿ ಕ್ಲಾರ್ಕ್ ಕೈಗಳ ಸಹಾಯದಿಂದ ಚಲಿಸಬಲ್ಲ ವಿಶ್ವದ ವೇಗದ ವ್ಯಕ್ತಿ ಎನಿಸಿಕೊಳ್ಳಬೇಕೆಂದು ಮೊದಲ ಪ್ರಯತ್ನ ಮಾಡಿದರು. ಈ ಹಿಂದಿನ 4.78 ಸೆಕೆಂಡ್ಗಳ ದಾಖಲೆಯನ್ನು ಮುರಿಯುವಲ್ಲಿ ಕ್ಲಾರ್ಕ್ ಯಶಸ್ವಿಯಾದರು.
https://www.instagram.com/tv/CUNq5QGjUBZ/?utm_source=ig_web_copy_link
https://www.instagram.com/p/CT5GJ5rvR9x/?utm_source=ig_web_copy_link