alex Certify ನೃತ್ಯ ಮಾಡಿದ ಕಾರಣಕ್ಕೆ ವಿದ್ಯಾರ್ಥಿನಿಗೆ ಡಿಪ್ಲೊಮಾ ಸರ್ಟಿಫಿಕೇಟ್​ ನಿರಾಕರಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೃತ್ಯ ಮಾಡಿದ ಕಾರಣಕ್ಕೆ ವಿದ್ಯಾರ್ಥಿನಿಗೆ ಡಿಪ್ಲೊಮಾ ಸರ್ಟಿಫಿಕೇಟ್​ ನಿರಾಕರಣೆ

ಫಿಲಡೆಲ್ಫಿಯಾ: ಇಲ್ಲಿಯ ಹೈಸ್ಕೂಲ್ ಫಾರ್ ಗರ್ಲ್ಸ್‌ನಿಂದ ಪದವಿ ಪಡೆಯಬೇಕಿದ್ದ ವಿದ್ಯಾರ್ಥಿನಿಯೊಬ್ಬಳು ಪದವಿ ಸಮಾರಂಭದಲ್ಲಿ ನೃತ್ಯ ಮಾಡಿದಳು ಎನ್ನುವ ಕಾರಣಕ್ಕೆ ಡಿಪ್ಲೋಮಾ ಸರ್ಟಿಫಿಕೇಟ್​ ನಿರಾಕರಿಸಲಾಗಿದೆ.

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ ಹಫ್ಸಾಹ್ ಅಬ್ದುರ್-ರಹಮಾನ್, ಹೂವಿನ ಗುಚ್ಛವನ್ನು ಹೊತ್ತುಕೊಂಡು ವೇದಿಕೆಯ ಮೇಲೆ ಕುಳಿತಿರುವುದನ್ನು ನೋಡಬಹುದು. ಅವಳು ತನ್ನ ಹೆಸರನ್ನು ಕರೆದ ನಂತರ ಪದವಿ ಸ್ವೀಕರಿಸಲು ಮುಂದಾದಾಗ ವೇದಿಕೆಯಲ್ಲಿ ಖುಷಿಯಿಂದ ನೃತ್ಯ ಮಾಡಲು ಪ್ರಾರಂಭಿಸುತ್ತಾಳೆ. ಅವಳು ತನ್ನ ಡಿಪ್ಲೊಮಾ ಸರ್ಟಿಫಿಕೇಟ್​ ಪಡೆಯಲು ಪ್ರಾಂಶುಪಾಲರನ್ನು ಸಮೀಪಿಸಿದಾಗ, ಪ್ರಾಂಶುಪಾಲರು ಆಕೆಯನ್ನು ವಾಪಸ್​ ಕಳಿಸುತ್ತಾರೆ.

ನಂತರ ಮುಖ್ಯೋಪಾಧ್ಯಾಯರು ಡಿಪ್ಲೋಮಾ ಸರ್ಟಿಫಿಕೇಟ್​ ಅನ್ನು ವೇದಿಕೆ ಮೇಲಿರುವ ಬುಟ್ಟಿಯಲ್ಲಿ ಎಸೆದು ಅವಮಾನ ಮಾಡುವುದನ್ನು ನೋಡಬಹುದು. ಇಂಥ ಕೃತ್ಯವನ್ನು ನಾವು ಸಹಿಸುವುದಿಲ್ಲ. ವಿದ್ಯಾರ್ಥಿನಿಯರಿಗೆ ಕೆಲವೊಂದು ಕಟ್ಟುಪಾಡುಗಳನ್ನು ವಿಧಿಸಲಾಗಿದ್ದು, ನೃತ್ಯ ಮಾಡುವುದು ಸರಿಯಲ್ಲ ಎನ್ನುವುದು ಪ್ರಾಂಶುಪಾಲರ ಅಭಿಪ್ರಾಯ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...