ಫೇಸ್ ಮಾಸ್ಕ್ ಗಳಲ್ಲೂ ಹಲವು ಬಗೆಗಳಿರುತ್ತವೆ. ಎಲ್ಲರಿಗೂ ಒಂದೇ ಪ್ರಕಾರದ ಫೇಸ್ ಮಾಸ್ಕ್ ಹೊಂದಿಕೆಯಾಗದಿರಬಹುದು. ಹಾಗಾದರೆ ಯಾರಿಗೆ ಯಾವ ಫೇಸ್ ಮಾಸ್ಕ್ ಹೊಂದಿಕೊಳ್ಳುತ್ತದೆ ಎಂಬುದನ್ನು ನೋಡೋಣ.
ನಿಮ್ಮ ತ್ವಚೆಯಲ್ಲಿ ಎಣ್ಣೆಯಂಶ ಹೆಚ್ಚಿದ್ದರೆ ನೀವು ಕ್ಲೇ ಮಾಸ್ಕ್ ಬಳಸಿ. ಇದು ತ್ವಚೆಯನ್ನು ಸ್ವಚ್ಛಗೊಳಿಸುತ್ತದೆ. ನಿಮ್ಮ ತ್ವಚೆಯ ರಂಧ್ರಗಳನ್ನು ದೂರಮಾಡಿ ತ್ವಚೆಯನ್ನು ಮೃದುಗೊಳಿಸುತ್ತದೆ.
ಇನ್ನು ನಿಮ್ಮದು ಸೂಕ್ಷ್ಮ ತ್ವಚೆಯಾಗಿದ್ದರೆ ಹೈಡ್ರೋಜೆಲ್ ಮಾಸ್ಕ್, ಡಲ್ ಇರುವ ತ್ವಚೆಗಾದರೆ ಎಕ್ಸ್ ಪೋಲಿಯೇಟಿಂಗ್ ಮಾಸ್ಕ್ ಬಳಸಬಹುದು. ರಾತ್ರಿಯಿಡೀ ಮಾಸ್ಕ್ ಹಾಕಿ ಬೆಳಗೆದ್ದು ತೊಳೆಯುವುದರಿಂದ ನಿಮ್ಮ ತ್ವಚೆಯಲ್ಲಿರುವ ಸುಕ್ಕುಗಳು ದೂರವಾಗಿ ನಿಮ್ಮ ವಯಸ್ಸು ಮತ್ತಷ್ಟು ಕಡಿಮೆಯಾಗುತ್ತದೆ.
ರೆಡಿಮೆಡ್ ಶೀಟ್ ಮಾಸ್ಕ್ ಗಳು ಸಾಮಾನ್ಯವಾಗಿ ಎಲ್ಲಾ ವಿಧದ ಚರ್ಮಗಳಿಗೂ ಹೊಂದಿಕೊಳ್ಳುತ್ತದೆ. ಹಾಗಾಗಿ ಮಾಸ್ಕ್ ಬಳಸುವ ಮುನ್ನ ನಿಮ್ಮ ತ್ವಚೆಗೆ ಹೊಂದಿಕೊಳ್ಳುವ ಮಾಸ್ಕ್ ಗಳನ್ನು ಆಯ್ದುಕೊಳ್ಳುವುದು ಬಹಳ ಮುಖ್ಯ.