
ಬೆಂಗಳೂರು: ನೆಲಮಂಗಲದ ದಾಸನಪುರ ಹೋಬಳಿಯ ತೋಟದಗುಡ್ಡದಹಳ್ಳಿ ಮನೆಯೊಂದರಲ್ಲಿ ಟಿವಿಯೊಳಗೆ ಸೇರಿಕೊಂಡಿದ್ದ 7 ಅಡಿ ಉದ್ದದ ಹಾವು ಹೊರ ತೆಗೆಯಲಾಗಿದೆ.
ಹೇಮಾವತಿ ಎಂಬುವರ ಮನೆಯಲ್ಲಿದ್ದ ಟಿವಿಯಲ್ಲಿ 7 ಅಡಿ ಉದ್ದದ ಕೇರೆ ಹಾವು ಸೇರಿಕೊಂಡಿದ್ದು, ಮೂರು ದಿನಗಳಿಂದ ಟಿವಿಯಲ್ಲಿ ವಿಚಿತ್ರ ಶಬ್ದ ಬರುತ್ತಿದ್ದ ಕಾರಣ ಮನೆಯವರು ಅನುಮಾನಗೊಂಡಿದ್ದಾರೆ. ಬಳಿಕ ಸ್ನೇಹಿತ ನಾಗೇಂದ್ರ ಅವರಿಗೆ ಕರೆ ಮಾಡಿ ಮಾಹಿತಿ ನೀಡಲಾಗಿದ್ದು ಸ್ಥಳಕ್ಕೆ ಆಗಮಿಸಿದ ಅವರು ಬಯಲಿಗೆ ಟಿವಿ ತೆಗೆದುಕೊಂಡು ಹೋಗಿ ನಿಧಾನವಾಗಿ ತೆಗೆದಾಗ 7 ಅಡಿ ಉದ್ದದ ಹಾವು ಕಾಣಿಸಿಕೊಂಡಿದೆ. ಅದನ್ನು ರಕ್ಷಿಸಿ ಸಮೀಪದ ಹೆಸರುಘಟ್ಟ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ.