alex Certify ಈ ದೇಶದ ಜನರಿಗೆ ಹಾವಿನಿಂದ ಮಾಡಿದ ಪಿಜ್ಜಾ ಫೇವರಿಟ್‌; ಸ್ನೇಕ್‌ ಸೂಪ್‌ಗಾಗಿಯೂ ಇವರು ಕ್ಯೂನಲ್ಲಿ ನಿಲ್ತಾರೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ದೇಶದ ಜನರಿಗೆ ಹಾವಿನಿಂದ ಮಾಡಿದ ಪಿಜ್ಜಾ ಫೇವರಿಟ್‌; ಸ್ನೇಕ್‌ ಸೂಪ್‌ಗಾಗಿಯೂ ಇವರು ಕ್ಯೂನಲ್ಲಿ ನಿಲ್ತಾರೆ…!

ಇತ್ತೀಚಿನ ದಿನಗಳಲ್ಲಿ ಜನರು ವಿಚಿತ್ರವಾದ ಆಹಾರಗಳನ್ನು ಇಷ್ಟಪಡಲು ಪ್ರಾರಂಭಿಸಿದ್ದಾರೆ. ಭಾರತದಲ್ಲಿ ಸಸ್ಯಾಹಾರ ಮತ್ತು ಮಾಂಸಾಹಾರ ಎರಡಕ್ಕೂ ಸಾಕಷ್ಟು ಬೇಡಿಕೆ ಇದೆ. ಪಿಜ್ಜಾ, ಬರ್ಗರ್‌ ಇವೆಲ್ಲ ತಿಂಡಿಪೋತರ ಫೇವರಿಟ್‌. ಪಿಜ್ಜಾದಲ್ಲಿ ವೆಜ್‌-ನಾನ್‌ವೆಜ್‌ ಎರಡೂ ಲಭ್ಯವಿದೆ. ಆದರೆ ನೀವು ಎಂದಾದರೂ ಸ್ನೇಕ್‌ ಪಿಜ್ಜಾ ಬಗ್ಗೆ ಕೇಳಿದ್ದೀರಾ? ಹಾಂಗ್‌ಕಾಂಗ್‌ ದೇಶದಲ್ಲಿ ಇದು ಬಹಳ ಫೇಮಸ್‌.

ಅಮೆರಿಕದ ಪಿಜ್ಜಾ ಕಂಪನಿ ಪಿಜ್ಜಾ ಹಟ್‌, ತನ್ನ ಹಾಂಗ್ ಕಾಂಗ್ ಔಟ್‌ಲೆಟ್‌ನಲ್ಲಿ ಪಿಜ್ಜಾಕ್ಕೆ ಹಾವಿನ ಪರಿಮಳವನ್ನು ಸೇರಿಸ್ತಿದೆ. ಈ ಹೊಸ ರೀತಿಯ ಪಿಜ್ಜಾದಲ್ಲಿ ಕತ್ತರಿಸಿದ ಹಾವಿನ ಮಾಂಸ, ಕಪ್ಪು ಅಣಬೆಗಳು ಮತ್ತು ಡ್ರೈ ಚೈನೀಸ್‌ ಹ್ಯಾಮ್‌ನ ಕಾಂಬಿನೇಶನ್‌ ಇರುತ್ತದೆ. ಈ ರುಚಿ ಎಲ್ಲಾ ಗ್ರಾಹಕರಿಗೆ ಇಷ್ಟವಾಗಿಲ್ಲ.

ಹಾಂಗ್‌ಕಾಂಗ್‌ ಮತ್ತು ದಕ್ಷಿಣ ಚೀನಾದ ಜನರಿಗೆ ಹಾವಿನ ಸೂಪ್ ಕೂಡ ಫೇವರಿಟ್‌. ತಂಪಾದ ಹವಾಮಾನದಲ್ಲಿ ಅವರು ಇದನ್ನು ಸೇವಿಸ್ತಾರೆ.ಸ್ನೇಕ್‌ ಸ್ಟ್ಯೂನಲ್ಲಿ ಹಲವು ವಿಧಗಳಿವೆ. ಅವೆಲ್ಲವೂ ಮಾಂಸ ಮತ್ತು ಚೀನೀ ಗಿಡಮೂಲಿಕೆಗಳನ್ನು ಒಳಗೊಂಡಿರುತ್ತವೆ.

ಕೆಲವು ಹಾವಿನ ಸೂಪ್‌ಗಳಿಗೆ ಚಿಕನ್‌ ಅಥವಾ ಹಂದಿಮಾಂಸದಂತಹ ಇತರ ಮಾಂಸಗಳನ್ನು ಸಹ ಹಾಕಲಾಗುತ್ತದೆ. ಹಾವಿನ ಸೂಪ್ ಆರೋಗ್ಯಕ್ಕೆ ಬೆಸ್ಟ್‌ ಎನ್ನುತ್ತಾರೆ ಹಾಂಗ್‌ಕಾಂಗ್‌ನ ಜನರು. ಹಾವಿನ ಮಾಂಸವು ಚರ್ಮಕ್ಕೆ ಒಳ್ಳೆಯದಂತೆ. ಇದು ಉಷ್ಣತೆಯ ಭಾವನೆಯನ್ನು ನೀಡುತ್ತದೆ. ಆಗ್ನೇಯ ಏಷ್ಯಾದ ಇತರ ಭಾಗಗಳಾದ ವಿಯೆಟ್ನಾಂ ಮತ್ತು ಥೈಲ್ಯಾಂಡ್ನಲ್ಲಿ ಕೂಡ ಹಾವಿನ ಮಾಂಸವನ್ನು ತಿನ್ನುತ್ತಾರೆ.  ಆಹಾರಕ್ಕಾಗಿಯೇ ಅವರು ಹೊಲಗಳಲ್ಲಿ ಹಾವುಗಳನ್ನು ಸಾಕುತ್ತಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...