ಚಿಕ್ಕಮಗಳೂರು: ಸೆರೆಹಿಡಿಯಲಾಗಿದ್ದ ಹಾವು ಕಚ್ಚಿ ಉರಗ ರಕ್ಷಕ ಸ್ನೇಕ್ ನರೇಶ್ ಸಾವನ್ನಪ್ಪಿದ್ದಾರೆ. ಚಿಕ್ಕಮಗಳೂರಿನ ಹೌಸಿಂಗ್ ಬೋರ್ಡ್ ಬಳಿ ಘಟನೆ ನಡೆದಿದೆ.
ಸ್ನೇಕ್ ನರೇಶ್ ಎಂದೇ ಖ್ಯಾತರಾಗಿದ್ದ ಅವರು ಹೌಸಿಂಗ್ ಬೋರ್ಡ್ ಬಳಿ ಹಾವು ಕಚ್ಚಿ ಮೃತಪಟ್ಟಿದ್ದಾರೆ. ಅವರ ಬೈಕ್ ಡಿಕ್ಕಿಯಲ್ಲಿ ಎರಡು ಹಾವು, ಕಾರ್ ನಲ್ಲಿದ್ದ ಬ್ಯಾಗ್ ಗಳಲ್ಲಿ ಹತ್ತಾರು ಹಾವುಗಳು ಪತ್ತೆಯಾಗಿವೆ. ಅವುಗಳನ್ನು 15 ದಿನಗಳಿಗೊಮ್ಮೆ ಚಾರ್ಮಾಡಿ ಘಾಟ್ ಗೆ ಹೋಗಿ ಸ್ನೇಕ್ ನರೇಶ್ ಬಿಟ್ಟು ಬರುತ್ತಿದ್ದರು. ದುರದೃಷ್ಟವಶಾತ್ ಅವರು ಸೆರೆ ಹಿಡಿದ ಹಾವಿನಿಂದಲೇ ಸಾವನ್ನಪ್ಪಿದ್ದಾರೆ.