alex Certify ಇಲ್ಲಿ ಮನುಷ್ಯರಲ್ಲ ಹಾವು ಮಾಡುತ್ತೆ ಮಸಾಜ್….! ಬೆಚ್ಚಿಬೀಳಿಸುತ್ತೆ ಇದರ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿ ಮನುಷ್ಯರಲ್ಲ ಹಾವು ಮಾಡುತ್ತೆ ಮಸಾಜ್….! ಬೆಚ್ಚಿಬೀಳಿಸುತ್ತೆ ಇದರ ವಿಡಿಯೋ

ದೇಹದಲ್ಲಿ ಕಾಣಿಸಿಕೊಳ್ಳುವ ಆಯಾಸ, ನೋವನ್ನು ಕಡಿಮೆ ಮಾಡಲು ಜನರು ಮಸಾಜ್ ಸೆಂಟರ್ ಗಳಿಗೆ ಹೋಗುತ್ತಾರೆ. ಅಲ್ಲಿರುವ ಸಿಬ್ಬಂದಿ, ಮಸಾಜ್ ಮಾಡಿ, ಆಯಾಸವನ್ನು ಕಡಿಮೆ ಮಾಡುತ್ತಾರೆ. ಆದ್ರೆ ನೀವು ಹೋದ ಮಸಾಜ್ ಸೆಂಟರ್ ನಲ್ಲಿ ಮನುಷ್ಯರ ಬದಲು ಹಾವು ಮಸಾಜ್ ಮಾಡಿದ್ರೆ..!

ಹಾವು ನಿದ್ದೆಯಲ್ಲಿ ಕಂಡರೂ ಬೆಚ್ಚಿ ಬೀಳುವವರಿದ್ದಾರೆ. ಹಾಗಿರುವಾಗ ಹಾವಿನಿಂದ ಮಸಾಜ್ ಮಾಡಿಸಿಕೊಳ್ಳೋದಾ ಎನ್ನಬೇಡಿ. ಈಜಿಪ್ಟ್ ನ ರಾಜಧಾನಿ ಕೈರೋದ ಸ್ಪಾನಲ್ಲಿ ಹಾವಿನಿಂದ ಮಸಾಜ್ ಮಾಡಲಾಗುತ್ತದೆ. ಇದನ್ನು ಸ್ನೇಕ್ ಮಸಾಜ್ ಎಂದು ಕರೆಯಲಾಗುತ್ತದೆ. ಹಾವುಗಳನ್ನು ದೇಹದ ಮೇಲೆ ಹೊರಳಾಡಿಸುವ ಮೂಲಕ ಮಸಾಜ್ ಮಾಡಲಾಗುತ್ತದೆ.

ಹಾವಿನ ಮಸಾಜ್‌ನಲ್ಲಿ, ವ್ಯಕ್ತಿಯ ದೇಹದ ಮೇಲೆ ಹತ್ತಾರು ಹಾವುಗಳನ್ನು ಬಿಡಲಾಗುತ್ತದೆ. ನಂತರ ಹಾವುಗಳು ವ್ಯಕ್ತಿಯ ದೇಹದ ಮೇಲೆ ತೆವಳುತ್ತವೆ. ಹಾವಿನ ಮಸಾಜ್ ಸಮಯದಲ್ಲಿ ಅನೇಕ ಜನರು ಭಯಗೊಳ್ಳುತ್ತಾರೆ.

ಹಾವಿನ ಮಸಾಜ್ಗೆ ವಿಷಕಾರಿ ಹಾವುಗಳನ್ನು ಬಳಸುವುದಿಲ್ಲ. ಹಾಗಾಗಿ ಈ ಹಾವುಗಳಿಂದ ಯಾವುದೇ ಅಪಾಯವಿಲ್ಲ. ಜನರು ಆರಂಭದಲ್ಲಿ ಈ ಹಾವುಗಳಿಗೆ ಹೆದರುತ್ತಿದ್ದರೂ ಕ್ರಮೇಣ ಅವುಗಳಿಗೆ ಒಗ್ಗಿಕೊಳ್ಳುತ್ತಾರೆ. ಈ ಹಾವುಗಳು ದೇಹದ ಮೇಲೆ ಹರಿದಾಡಿದಾಗ ವಿಶ್ರಾಂತಿಯ ಅನುಭವವಾಗುತ್ತದೆ.

ದುರ್ಬಲ ಹೃದಯ ಹೊಂದಿದವರು ಹಾವಿನ ಮಸಾಜ್ ಮಾಡಿಸಿಕೊಳ್ಳದಿರುವುದು ಸೂಕ್ತವೆಂದು ಸ್ಪಾದಲ್ಲಿ ಹೇಳಲಾಗುತ್ತದೆ. ಸ್ನೇಕ್ ಮಸಾಜ್, ಕೀಲು ನೋವಿಗೆ ಪರಿಹಾರ ನೀಡುತ್ತದೆ ಎಂದು ಕೈರೋ ಸ್ಪಾ ಹೇಳುತ್ತದೆ. ಸ್ನೇಕ್ ಮಸಾಜ್ ನಿಂದ ದೇಹದಲ್ಲಿ ರಕ್ತ ಪರಿಚಲನೆ ಹೆಚ್ಚಾಗುತ್ತದೆ.

ಹಾವಿನ ಮಸಾಜನ್ನು ಸುಮಾರು ಅರ್ಧ ಗಂಟೆಯವರೆಗೆ ಮಾಡಲಾಗುತ್ತದೆ. ವ್ಯಕ್ತಿಯ ಬೆನ್ನಿನ ಮೇಲೆ ಎಣ್ಣೆಯನ್ನು ಸುರಿದು ಮಸಾಜ್ ಮಾಡಲಾಗುತ್ತದೆ. ಇದರ ನಂತರ ಹಾವುಗಳು ವ್ಯಕ್ತಿಯ ಬೆನ್ನಿನ ಮೇಲೆ ಬಿಡಲಾಗುತ್ತದೆ. ಗ್ರಾಹಕರಿಗೆ ಕಚ್ಚದಂತೆ ಹಾವಿಗೆ ತರಬೇತಿ ನೀಡಲಾಗಿರುತ್ತದೆ. ಆರಂಭದಲ್ಲಿ ಭಯವಾದ್ರೂ, ಸ್ನೇಕ್ ಮಸಾಜ್ ಆರಾಮ ನೀಡಿದೆ ಎಂದು ಅಲ್ಲಿಗೆ ಬರುವ ಗ್ರಾಹಕರು ಹೇಳ್ತಾರೆ.

ಹಾವು ಕಂಡ್ರೆ ಭಯವಿಲ್ಲ ಎನ್ನುವವರು ಕೈರೋಕ್ಕೆ ಹೋದಾಗ ಒಮ್ಮೆ ಹಾವಿನ ಸ್ಪಾಕ್ಕೆ ಹೋಗಿ ಬನ್ನಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...