ಯಾದಗಿರಿ: ಯಾದಗಿರಿ ಜಿಲ್ಲೆ ವಡಗೇರಾದ ಗುಡಿಹಾಳ ಗ್ರಾಮದಲ್ಲಿ ಪದೇ ಪದೇ ಹಾವು ಕಚ್ಚಿದ್ದರಿಂದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ.
ಬಸವರಾಜ ಪೂಜಾರಿ(65) ಮೃತಪಟ್ಟವರು ಎಂದು ಹೇಳಲಾಗಿದೆ. ಬಸವರಾಜ ಪೂಜಾರಿ ಸುಮಾರು 300 ಕ್ಕೂ ಹೆಚ್ಚು ಹಾವುಗಳನ್ನು ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ. ಶನಿವಾರ ಕೂಡ ಗ್ರಾಮದಲ್ಲಿ ಕಂಡ ಹಾವನ್ನು ಕೈಯಲ್ಲಿ ಹಿಡಿದು ದೂರಕ್ಕೆ ಬಿಡಲು ಹೋಗುತ್ತಿದ್ದ ಸಂದರ್ಭದಲ್ಲಿ ಹಿಡಿತ ಸಡಿಲಗೊಂಡು ಹಾವು ಪದೇ ಪದೇ ಕಚ್ಚಿದೆ. ಹೀಗೆ ಹಾವು ಕಚ್ಚಿದರೂ ಕೂಡ ಬಸವರಾಜ ಪೂಜಾರಿ ಹಾವನ್ನು ಬಿಡಲಿಲ್ಲ. 5 ಕ್ಕೂ ಹೆಚ್ಚು ಬಾರಿ ಕಚ್ಚಿದ ಹಾವನ್ನು ಕೈಯಲ್ಲಿ ಹಿಡಿದುಕೊಂಡೇ ಅವರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.