ಎಲ್ಲರ ಕೈಯಲ್ಲೂ ಮೊಬೈಲ್. ಆ ಮೊಬೈಲ್‌ನಲ್ಲಿ ಆನ್ಲೈನ್ ಗೇಮ್ ಇದ್ದರೆ ಸಾಕು, ಈ ಲೋಕವನ್ನೇ ಮರೆತು ಬಿಡ್ತಾರೆ. ಹೊರ ಜಗತ್ತಿಗೂ ಅವರಿಗೂ ಸಂಬಂಧವೇ ಇಲ್ಲದಂತೆ ಇದ್ದು ಬಿಡ್ತಾರೆ. ಈ ಲೋಕದ ಅರಿವೆಯೇ ಇಲ್ಲದಂತೆ ಆನ್ಲೈನ್ ಗೇಮ್ ಆಡುತ್ತಿರೋ ಯುವಕನೊಬ್ಬನಿಗೆ ಭಯಂಕರ ಅನುಭವವಾಗಿದೆ.
ಎಂದಿನಂತೆ ಕೈಯಲ್ಲಿ ಮೊಬೈಲ್ ಹಿಡಿದುಕೊಂಡು ಆ ಯುವಕ ಶೌಚಾಲಯಕ್ಕೆ ತೆರಳಿದ್ದಾನೆ. ಅದ್ಯಾವ ಘಳಿಗೆಯಲ್ಲಿ ಹಾವು ಆತನ ಶೌಚಾಲಯದೊಳಗೆ ಸೇರಿಕೊಂಡಿದೆಯೋ ಏನೋ. ಗೇಮ್ ಒಳಗೆ ಸಂಪೂರ್ಣವಾಗಿ ಮುಳುಗಿರೋ ಆತನಿಗೆ ಅದು ಗೊತ್ತಾಗಲೇ ಇಲ್ಲ. ಕೊನೆಗೆ ಅದೇ ಹಾವು ಆತನ ಪೃಷ್ಠಕ್ಕೆ ಕಚ್ಚಿದೆ. ಆಗಲೇ ಆ ಪುಣ್ಯಾತ್ಮ ವಾಸ್ತವ ಲೋಕಕ್ಕೆ ಬಂದಿದ್ದು.
ಈ ಪೊಲೀಸ್ ಠಾಣೆಗೆ ಬಿಜೆಪಿ ಕಾರ್ಯಕರ್ತರಿಗೆ ಪ್ರವೇಶ ನಿಷೇಧಿಸಲಾಗಿದೆ!
ಹಾವು ಕಚ್ಚಿದ ಆಘಾತಕ್ಕೆ ಆತ ಸ್ನಾನದ ಮನೆಯ ಬಾಗಿಲನ್ನೇ ಒಡೆದು ಹೊರಗೆ ಓಡಿ ಬಂದಿದ್ದಾನೆ. ಹಾವು ವಿಷಕಾರಿ ಅಲ್ಲದೇ ಇರುವುದರಿಂದ ಆತನ ಜೀವಕ್ಕೆ ಏನೂ ಅಪಾಯವಾಗಿರಲಿಲ್ಲ. ಆದರೆ ಹಾವು ಕಚ್ಚಿದಾಕ್ಷಣ ಆತ ಭಯದಿಂದ ಹಾವನ್ನ ಹಿಡಿದು ಎಳೆದಿದ್ದಾನೆ. ಆದ್ದರಿಂದ ಎರಡು ವಾರದ ನಂತರವೂ ಗಾಯವಾಗಿರೋ ಪೃಷ್ಠದ ಭಾಗದಲ್ಲಿ ಹಾವಿನ ಹಲ್ಲು ಹಾಗೆಯೇ ಉಳಿದಿದೆ ಅಂತ ಆ ವ್ಯಕ್ತಿಗೆ ಚಿಕಿತ್ಸೆ ಕೊಟ್ಟಿರೋ ವೈದ್ಯರು ಹೇಳಿದ್ದಾರೆ.
ಟ್ವಿಟ್ ಮಾಡಿ ತನಗಾದ ಭಯಾನಕ ಅನುಭವವನ್ನ ಆ ಮಹಾನುಭಾವ ಹೇಳಿಕೊಂಡಿದ್ದಾನೆ. ಸುತ್ತಮುತ್ತಲೂ ಗಿಡಗಂಟಿಗಳು ಬೆಳೆದ ಪ್ರದೇಶವಾದ್ದರಿಂದ ಹಾವು ಇಲ್ಲಿ ಬಂದಿರಬಹುದು ಅಂತ ಹೇಳಲಾಗಿದೆ. ಈಗಾಗಲೇ ಅಗ್ನಿಶಾಮಕದಳದವರು ಬಂದು ಹಾವನ್ನ ಹಿಡಿದುಕೊಂಡು ಹೋಗಿ ಪ್ರಾಣಿದಯಾ ಸಂಘದವರಿಗೆ ಒಪ್ಪಿಸಿದ್ದಾರೆ.