alex Certify ವಿಲಕ್ಷಣ ಸಾಹಸದ ವೇಳೆ ಯಡವಟ್ಟು; ಖಾಸಗಿ ಅಂಗಕ್ಕೆ ಕಚ್ಚಿದ ಹಾವು | Viral Video | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಲಕ್ಷಣ ಸಾಹಸದ ವೇಳೆ ಯಡವಟ್ಟು; ಖಾಸಗಿ ಅಂಗಕ್ಕೆ ಕಚ್ಚಿದ ಹಾವು | Viral Video

ಇಂಡೋನೇಷಿಯಾ: ಸಾಮಾಜಿಕ ಮಾಧ್ಯಮದ ಪ್ರಭಾವಿ ಅಂಗರಾ ಶೋಜಿ ಅವರ ವಿಲಕ್ಷಣ ಸಾಹಸದ ಕ್ಷಣಗಳ ವೇಳೆ ಖಾಸಗಿ ಭಾಗಕ್ಕೆ ಹಾವು ಕಚ್ಚಿದ ಘಟನೆ ವೈರಲ್ ಆಗಿದೆ.

ಹಾವುಗಳೊಂದಿಗೆ ಸ್ಟಂಟ್‌ ಗಳನ್ನು ಮಾಡುವ ವಿಡಿಯೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡುವ ಮೂಲಕ ಹೆಸರುವಾಸಿಯಾಗಿರುವ ಶೋಜಿ ಹಂಚಿಕೊಂಡ ಇತ್ತೀಚಿನ ವಿಡಿಯೋ ಅಭಿಮಾನಿಗಳನ್ನು ಆಘಾತಗೊಳಿಸಿದೆ. ಈ ವಿಡಿಯೋದಲ್ಲಿ ಶೋಜಿ ತನ್ನ ಖಾಸಗಿ ಭಾಗಕ್ಕೆ ಹಾವು ಕಚ್ಚಿದಾಗ ಅವರು ಅನುಭವಿಸಿದ ನೋವನ್ನು ತೋರಿಸಲಾಗಿದೆ.

ಹಾವಿನ ಬಾಲವನ್ನು ಹಿಡಿದುಕೊಂಡಿದ್ದ ಶೋಜಿ ಅವರಿಗೆ ಹಾವು ಅವರ ಖಾಸಗಿ ಅಂಗಕ್ಕೆ ಕಚ್ಚಿದ್ದು, ಅವರು ಬೆವರು ಸುರಿಸುತ್ತಾ ಮತ್ತು ಮುಖಭಂಗವನ್ನು ಅನುಭವಿಸುತ್ತಾ ಕಾಣಿಸಿಕೊಂಡಿದ್ದಾರೆ.

ವಿಡಿಯೋ ಮುಂದುವರಿಯುತ್ತಿದ್ದಂತೆ, ಅವರು ನೆಲದ ಮೇಲೆ ಕುಳಿತುಕೊಳ್ಳಲು ಪ್ರಯತ್ನಿಸಿದ್ದು, ಆದರೆ ಹಾವಿನ ಹಿಡಿತದಿಂದ ತಮ್ಮನ್ನು ತಾವು ಬಿಡಿಸಿಕೊಳ್ಳಲು ಸಾಧ್ಯವಾಗಿಲ್ಲ.

ಈ ವಿಡಿಯೋ ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿದ್ದು, 1 ಲಕ್ಷಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದುಕೊಂಡಿದೆ. “ಇದು ಮ್ಯಾಂಗ್ರೋವ್ ಹಾವು, ಸೌಮ್ಯ ವಿಷವುಳ್ಳ ಹಿಂಭಾಗದ ಹಲ್ಲುಗಳನ್ನು ಹೊಂದಿದೆ, ಅದು ಅವರಿಗೆ ತಿಳಿದಿದೆ” ಎಂದು ಒಬ್ಬ ಬಳಕೆದಾರರು ಹೇಳಿದ್ದಾರೆ. “ನಾನು ಸ್ಕ್ರೋಲ್ ಮಾಡಿದ ತಕ್ಷಣ ಒಂದು ಸೆಕೆಂಡ್‌ ನೋವನ್ನು ಅನುಭವಿಸಿದೆ” ಎಂದು ಮತ್ತೊಬ್ಬರು ಬರೆದಿದ್ದಾರೆ.

 

View this post on Instagram

 

A post shared by Anggara Shoji (@jejaksiaden)

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...