ಹಾವು ಹಿಡಿದು ನೂರಾರು ಜನರ ಪ್ರಾಣ ಉಳಿಸುತ್ತಿದ್ದ ವ್ಯಕ್ತಿಯೊಬ್ಬ ಹಾವು ಕಚ್ಚಿ ಸಾವನ್ನಪ್ಪಿದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಗೊಂಡಿಯಾ ನಗರದ 44 ವರ್ಷದ ಹಾವು ತಜ್ಞ, ಹಾವು ಕಚ್ಚಿ ಸಾವನ್ನಪ್ಪಿದ್ದಾರೆ. ಮೃತ ವ್ಯಕ್ತಿ ಸುನಿಲ್ ನಾಗ್ಪುರ್.
ಸುನಿಲ್ ನಾಗ್ಪುರ್ ಎಲ್ಲೇ ಹಾವು ಕಂಡ್ರು ಬರ್ತಿದ್ದರು. ಹಾವನ್ನು ರಕ್ಷಿಸಿ, ಅದನ್ನು ಸುರಕ್ಷಿತ ಸ್ಥಳಕ್ಕೆ ಬಿಡುತ್ತಿದ್ದರು. ಈವರೆಗೆ ನೂರಕ್ಕೂ ಹೆಚ್ಚು ಹಾವುಗಳನ್ನು ಅವರು ರಕ್ಷಿಸಿದ್ದಾರೆ.
ಸೋಮವಾರ ಸಂಜೆ ಗೊಂಡಿಯಾದ ಕರಾಂಜದ ಮನೆಯೊಂದರಲ್ಲಿ ನಾಗರ ಹಾವು ಪತ್ತೆಯಾಗಿತ್ತು. ಈ ಸಂಬಂಧ ಸುನಿಲ್ ನಾಗ್ಪುರ್ ಅವರಿಗೆ ಕರೆ ಮಾಡಲಾಗಿತ್ತು. ಅಲ್ಲಿಗೆ ಬಂದ ಸುನಿಲ್, ಹಾವನ್ನು ಹಿಡಿದು ಅದನ್ನು ಬ್ಯಾಗ್ ಗೆ ತುಂಬುತ್ತಿದ್ದರು. ಈ ವೇಳೆ ಹಾವು ಕಚ್ಚಿದೆ. ತಕ್ಷಣ ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಯ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ.