
ಮಳೆಯಿಂದಾಗಿ ಪಂದ್ಯ ರದ್ದಾಗುವ ವೇಳೆಯಲ್ಲಿ ಸ್ಮೃತಿ ಮಂದಾನ 80 ರನ್ಗಳನ್ನು ಪೇರಿಸಿದ್ದರು. ಇಂದು ಎರಡನೇ ದಿನದ ಆಟ ಮುಂದುವರಿಸಿದ ಮಂದಾನ ಶತಕವನ್ನು ಸಿಡಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ.
ಆಸ್ಟ್ರೇಲಿಯಾದ ಕ್ಯಾರರಾದಲ್ಲಿ ನಡೆಯುತ್ತಿರುವ ಟೀಂ ಇಂಡಿಯಾ ಹಾಗೂ ಆಸಿಸ್ ನಡುವಿನ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದಿದ್ದ ಆಸ್ಟ್ರೇಲಿಯಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು. ಆದರೆ ಆಸ್ಟ್ರೇಲಿಯಾ ಬೌಲರ್ಗಳ ಎದುರು ಭರ್ಜರಿ ಪ್ರದರ್ಶನ ತೋರುವ ಮೂಲಕ ಸ್ಮೃತಿ ಮಂದಾನ ಆಸ್ಟ್ರೇಲಿಯಾ ಲೆಕ್ಕಾಚಾರವನ್ನು ತಲೆಕೆಳಗು ಮಾಡಿದ್ದಾರೆ.
ಆರಂಭಿಕವಾಗಿ ಕಣಕ್ಕೆ ಇಳಿದಿದ್ದ ಸ್ಮೃತಿ ಮಂದಾನ ಹಾಗೂ ಶಫಾಲಿ ವರ್ಮಾ ತಂಡಕ್ಕೆ 93 ರನ್ಗಳನ್ನು ಸೇರಿಸಿಕೊಡುವಲ್ಲಿ ಯಶಸ್ವಿಯಾದರು. ಬಳಿಕ 31 ರನ್ಗೆ ಶಫಾಲಿ ವರ್ಮಾ ಔಟಾಗಿ ಪೆವಿಲಿಯನ್ಗೆ ಮರಳಿದ್ರು. ಇದಾದ ಬಳಿಕ ಪೂನಮ್ ರಾವತ್ ಜೊತೆ ಆಟವಾಡಿದ ಮಂದಾನಾ ಈ ಐತಿಹಾಸಿಕ ಸಾಧನೆ ನಿರ್ಮಿಸಿ ಮುನ್ನುಗ್ಗಿದ್ದಾರೆ.