alex Certify ಉಕ್ರೇನ್ ನಿಂದ ಮರಳಿದ ಭಾರತೀಯರನ್ನು ಮಾತೃಭಾಷೆಯಲ್ಲಿ ಸ್ವಾಗತಿಸಿದ ಸ್ಮೃತಿ ಇರಾನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉಕ್ರೇನ್ ನಿಂದ ಮರಳಿದ ಭಾರತೀಯರನ್ನು ಮಾತೃಭಾಷೆಯಲ್ಲಿ ಸ್ವಾಗತಿಸಿದ ಸ್ಮೃತಿ ಇರಾನಿ

ನವದೆಹಲಿ: ಉಕ್ರೇನ್‌ ನಲ್ಲಿ ಸಿಲುಕಿಕೊಂಡಿದ್ದ ಭಾರತೀಯರು ಪೋಲೆಂಡ್‌ ನಿಂದ ವಿಶೇಷ ವಿಮಾನದಲ್ಲಿ ಹಿಂದಿರುಗಿದ ನಂತರ ಕೇಂದ್ರ ಸಚಿವೆ ಮತ್ತು ಭಾರತೀಯ ಜನತಾ ಪಕ್ಷದ(ಬಿಜೆಪಿ) ನಾಯಕಿ ಸ್ಮೃತಿ ಇರಾನಿ ಅವರು ಬರಮಾಡಿಕೊಂಡರು.

ಬುಕಾರೆಸ್ಟ್‌ ನಿಂದ ಬಂದ 218 ನಾಗರಿಕರಿಗೆ ತಮ್ಮ ಪ್ರಾದೇಶಿಕ ಭಾಷೆಗಳಲ್ಲಿ ಮಾತನಾಡುವ ಮೂಲಕ ಸ್ಮೃತಿ ಇರಾನಿ ಸ್ವಾಗತಿಸಿದರು.

ಮನೆಗೆ ಹಿಂತಿರುಗಿ ಸ್ವಾಗತ, ನಿಮ್ಮ ಕುಟುಂಬಗಳು ಉಸಿರು ಬಿಗಿಹಿಡಿದು ಕಾಯುತ್ತಿವೆ. ನೀವು ಅನುಕರಣೀಯವಾದ ಧೈರ್ಯ ತೋರಿಸಿದ್ದೀರಿ. ವಿಮಾನ ಸಿಬ್ಬಂದಿಗೆ ಧನ್ಯವಾದ ಹೇಳೋಣ ಎಂದು ಅವರು ವಿಶೇಷ ಇಂಡಿಗೋ ವಿಮಾನದಲ್ಲಿ ವಿದ್ಯಾರ್ಥಿಗಳಿಗೆ ಹೇಳಿದರು.

ನಮ್ಮ ನಾಗರಿಕರನ್ನು ಮರಳಿ ಮನೆಗೆ ಕರೆತರುವಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಪ್ರಯತ್ನಗಳಿಗೆ ಅವರ ಸೇವೆ ಮತ್ತು ಬೆಂಬಲಕ್ಕಾಗಿ ನಮ್ಮ ವಿಮಾನಯಾನ ಸಿಬ್ಬಂದಿ ಮತ್ತು ಪೈಲಟ್‌ ಗಳಿಗೆ ನಾನು ಕೃತಜ್ಞನಾಗಿದ್ದೇನೆ ಎಂದು ತಿಳಿಸಿದ್ದಾರೆ.

ಉಕ್ರೇನ್‌ ನಲ್ಲಿ ಸಿಲುಕಿರುವ 183 ಭಾರತೀಯರನ್ನು ಹೊತ್ತ ಬುಕಾರೆಸ್ಟ್‌ ನಿಂದ ಮತ್ತೊಂದು ವಿಮಾನ ಗುರುವಾರ ಬೆಳಿಗ್ಗೆ ಮುಂಬೈಗೆ ಬಂದಿಳಿದಿದೆ. ಪ್ರಯಾಣಿಕರನ್ನು ಕೇಂದ್ರ ಸಚಿವ ರಾಚ್ ಸಾಹೇಬ್ ದಾನ್ವೆ ಸ್ವಾಗತಿಸಿದರು

ಇಲ್ಲಿಯವರೆಗೆ ಸುಮಾರು ಐದು ಸಾವಿರ ಭಾರತೀಯರನ್ನು ಮನೆಗೆ ಕರೆತರಲಾಗಿದೆ. ಆಪರೇಷನ್ ಗಂಗಾ ಹೆಸರಿನ ಕಾರ್ಯಾಚರಣೆಯು ಉಕ್ರೇನ್ ಮತ್ತು ನೆರೆಯ ದೇಶಗಳಲ್ಲಿ ಇನ್ನೂ ಸಿಲುಕಿರುವವರನ್ನು ಮರಳಿ ಕರೆತರುವುದನ್ನು ಮುಂದುವರಿಸಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...