
ಕಾರ್ಗಿಲ್ ಯುದ್ಧದ ಹೀರೊ ಕ್ಯಾಪ್ಟನ್ ವಿಕ್ರಂ ಬಾತ್ರಾ ಅವರ ಜೀವನದ ಸ್ವಲ್ಪ ಭಾಗವನ್ನು ಆಧಾರವಾಗಿರಿಸಿಕೊಂಡು ಸಿದ್ಧಪಡಿಸಲಾಗಿರುವ ಹಿಂದಿ ಸಿನಿಮಾ “ಶೇರ್ಶಾಹ್’ ಸದ್ಯ ದೇಶಾದ್ಯಂತ ತೆರೆಕಂಡಿದೆ.
ಒಟಿಟಿಯಲ್ಲಿ ಇದನ್ನು ಬಿಡುಗಡೆ ಮಾಡಲಾಗಿದೆ. ನಿಜ ಜೀವನದಲ್ಲೂ ಲವ್ ಬರ್ಡ್ಸ್ ಎನ್ನಲಾಗುತ್ತಿರುವ ಸಿದ್ಧಾರ್ಥ ರಾಯ್ ಕಪೂರ್ ಮತ್ತು ಕಿಯಾರ ಅಡ್ವಾನಿ ಅವರು ಜೋಡಿಯಾಗಿ ನಟಿಸಿರುವ ಈ ಸಿನಿಮಾ ಭಾರಿ ಜನಪ್ರಿಯತೆ ಗಳಿಸಿದೆ.
ಶಾಕಿಂಗ್ ನ್ಯೂಸ್: ಮನೆಯಲ್ಲೇ ಸ್ನೇಹಿತನೊಂದಿಗೆ ಪಾರ್ಟಿ ಮಾಡಿದ ಬಳಿಕ ತಂದೆಯಿಂದಲೇ ನೀಚಕೃತ್ಯ
ಆದರೆ, ಈಗ ವಿಷಯ ಅದಲ್ಲ. ಈ ಸಿನಿಮಾದ ‘ರಾಂಝಾ’ ಎಂಬ ಗೀತೆ ಜನರ ಮನಗೆದ್ದಿದೆ. ಅದರಲ್ಲೂ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ಮನಗೆದ್ದಿರುವುದು ವಿಶೇಷ. ಈ ಬಗ್ಗೆ ಅವರೇ ಇನ್ಸ್ಟಾಗ್ರಾಂ ಸ್ಟೋರೀಸ್ ನಲ್ಲಿ ಹಂಚಿಕೊಂಡಿದ್ದಾರೆ. ಈ ಗೀತೆಯನ್ನು ಜಸ್ಲೀನ್ ರಾಯಲ್ ಮತ್ತು ಬಿ ಪ್ರಾಕ್ ಹಾಡಿದ್ದಾರೆ.
